ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲೆಕ್ಟ್ರಿಕ್‌ ವಾಹನಗಳ ಬಳಕೆ ಉತ್ತೇಜಿಸಲು ಕಲಾಕೃತಿ ಪ್ರದರ್ಶನ

Last Updated 12 ನವೆಂಬರ್ 2022, 19:45 IST
ಅಕ್ಷರ ಗಾತ್ರ

ಬೆಂಗಳೂರು:ಎಲೆಕ್ಟ್ರಿಕ್‌ ವಾಹನಗಳ ಬಳಕೆಯನ್ನು ಉತ್ತೇಜಿಸಲು ನಗರದ ಚರ್ಚ್‌ಸ್ಟ್ರೀಟ್‌ನಲ್ಲಿ ಚಿತ್ತಾಕರ್ಷಕ ಕಲಾಕೃತಿಯೊಂದನ್ನು ರೂಪಿಸಲಾಗಿದೆ.

ಗುಜರಿ ಸಾಮಗ್ರಿಗಳಿಗೆ ಹೊಳಪು ನೀಡಿ ಎಲೆಕ್ಟ್ರಿಕ್‌ ವಾಹನದ ಪ್ರತಿಕೃತಿ ನಿರ್ಮಿಸಲಾಗಿದೆ. ಇದು ಸೌರಶಕ್ತಿಯ ನೆರವಿನಿಂದ ಕಾರ್ಯ
ನಿರ್ವಹಿಸುತ್ತದೆ. ಇದು ಎಲೆಕ್ಟ್ರಿಕ್‌ ವಾಹನಗಳ ಬಳಕೆಯತ್ತ ದೇಶ ದಾಪುಗಾಲಿಡುತ್ತಿರುವ ಕುರುಹು ಆಗಿದೆ.

ಬೆಂಗಳೂರು ಮೂವಿಂಗ್‌ ಹೆಸರಿನ ಸಂಸ್ಥೆಯೊಂದರ ‘ಇ.ವಿ ಮೈ ಡೆಲಿವರಿ‘ ಅಭಿಯಾನದ ಭಾಗವಾಗಿ ಈ ಎಲೆಕ್ಟ್ರಿಕಲ್‌ ತ್ರಿಚಕ್ರ ವಾಹನದ ಮಾದರಿ ಕಲೆ ಮತ್ತು ವಿಜ್ಞಾನದ ಸಂಗಮದಂತಿದೆ. ಸರಕು ಸಾಗಾಣಿಕೆಯಲ್ಲಿ ಎಲೆಕ್ಟ್ರಿಕ್‌ ವಾಹನಗಳ ಬಳಕೆಯ ಅಗತ್ಯತೆಯನ್ನು ಇದು ಪ್ರತಿಬಿಂಬಿಸುತ್ತದೆ.

ಚರ್ಚ್‌ಸ್ಟ್ರೀಟ್‌ ಮೆಟ್ರೊ ರೈಲು ನಿಲ್ದಾಣದ ಪ್ರವೇಶದ್ವಾರದಲ್ಲಿರುವ ಈ ಪ್ರತಿಕೃತಿ ಇದೇ ಭಾನುವಾರದವರೆಗೆ ವೀಕ್ಷಣೆಗೆ ಲಭ್ಯವಿರಲಿದೆ. ನಗರ ಭೂಸಾರಿಗೆ ನಿರ್ದೇಶನಾಲಯ ಮತ್ತು ಬೆಂಗಳೂರು ಮೆಟ್ರೊ ರೈಲು ನಿಗಮದ ಸಹಯೋಗದಲ್ಲಿ ಇದನ್ನು ಸ್ಥಾಪಿಸಲಾಗಿದೆ.

ಪ್ರತಿಕೃತಿಯನ್ನು ಅನಾವರಣ ಮಾಡಿ ಮಾತನಾಡಿದ ಕರ್ನಾಟಕ ನಗರ ಭೂಸಾರಿಗೆ ನಿರ್ದೇಶನಾಲಯದ ಆಯುಕ್ತರಾದ ವಿ. ಮಂಜುಳಾ ಅವರು ‘ಎಲೆಕ್ಟ್ರಿಕಲ್‌ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ಸರಕು ಪೂರೈಕೆಯಲ್ಲಿ ಬಳಸಿದರೆ ಬಹುದೊಡ್ಡ ಪ್ರಮಾಣದಲ್ಲಿ ವಾಯು ಮಾಲಿನ್ಯವನ್ನು ತಡೆಗಟ್ಟಬಹುದು. ಕರ್ನಾಟಕದಲ್ಲಿ ಸುಸ್ಥಿರ ಸಾರಿಗೆಗೆ ನಗರ ಭೂಸಾರಿಗೆ ನಿರ್ದೇಶನಾಲಯ ಒತ್ತು ನೀಡುತ್ತಿದೆ’ ಎಂದರು.

ಮುಂಬೈ ಮೂಲದ ವರ್ಕ್‌ಶಾಪ್‌ ಕ್ಯೂ ಕಲಾವಿದರಾದ ರಾಧಿಕಾ, ಮಾಧವಿ, ಬೆಂಗಳೂರಿನ ರಾಹುಲ್‌ ಕೆಪಿ ಒಗ್ಗೂಡಿ ಇದನ್ನು ನಿರ್ಮಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT