ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ವಾಪಸು ನೀಡದ ಸ್ನೇಹಿತ; ಫೇಸ್‌ಬುಕ್‌ನಲ್ಲಿ ವಿಡಿಯೊ ಹರಿಬಿಟ್ಟು ಆತ್ಮಹತ್ಯೆ

ನೇಣಿಗೆ ಶರಣು
Last Updated 28 ಫೆಬ್ರುವರಿ 2021, 21:00 IST
ಅಕ್ಷರ ಗಾತ್ರ

ಬೆಂಗಳೂರು: ತಮ್ಮಿಂದ ಪಡೆದಿದ್ದ ಲಕ್ಷಾಂತರ ರೂಪಾಯಿ ಹಣವನ್ನು ಸ್ನೇಹಿತ ವಾಪಸು ನೀಡದಿದ್ದರಿಂದ ನೊಂದಿದ್ದರು ಎನ್ನಲಾದ ಮಂಜುನಾಥ್‌ (28), ಫೇಸ್‌ಬುಕ್‌ನಲ್ಲಿ ವಿಡಿಯೊ ಹರಿಬಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

‘ಕೊತ್ತನೂರು ನಿವಾಸಿಯಾದ ಮಂಜುನಾಥ್, ಕೆಲದಿನಗಳಿಂದ ನಾಪತ್ತೆಯಾಗಿದ್ದರು. ಆ ಬಗ್ಗೆ ಕೊತ್ತನೂರು ಠಾಣೆಯಲ್ಲಿ ಶುಕ್ರವಾರ (ಫೆ. 26) ಪ್ರಕರಣ ದಾಖಲಾಗಿತ್ತು. ನಮ್ಮ ಠಾಣೆ ವ್ಯಾಪ್ತಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಶನಿವಾರ ಸಿಕ್ಕಿದೆ’ ಎಂದು ಬಾಗಲೂರು ಠಾಣೆ ಪೊಲೀಸ್ ಮೂಲಗಳು ಹೇಳಿವೆ.

‘ಲಕ್ಷಾಂತರ ರೂಪಾಯಿ ಪಡೆದಿದ್ದ ಸ್ನೇಹಿತ ಪವನ್, ಹಣವನ್ನು ಇದುವರೆಗೂ ವಾಪಸು ನೀಡಿಲ್ಲ. ಹಣ ಕೇಳಿದ್ದಕ್ಕೆ ಜೀವ ಬೆದರಿಕೆ ಹಾಕುತ್ತಿದ್ದಾನೆ. ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ಆ ಸ್ನೇಹಿತನೇ ಕಾರಣ’ ಎಂದು ಆರೋಪಿಸಿ ವಿಡಿಯೊ ಚಿತ್ರೀಕರಿಸಿದ್ದ ಮಂಜುನಾಥ್, ಅದನ್ನು ತಮ್ಮ ಫೇಸ್‌ಬುಕ್‌ ಖಾತೆಗೆ ಅಪ್‌ಲೋಡ್ ಮಾಡಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ವಿಡಿಯೊ ನೋಡಿದ್ದ ಕುಟುಂಬದವರು ಹಾಗೂ ಸ್ನೇಹಿತರು, ಮಂಜುನಾಥ್ ಮೊಬೈಲ್‌ಗೆ ಕರೆ ಮಾಡಿದ್ದರು. ಆದರೆ, ಮೊಬೈಲ್ ಸ್ವಿಚ್ಡ್ ಆಫ್‌ ಆಗಿತ್ತು. ಠಾಣೆಗೂ ಮಾಹಿತಿ ನೀಡಿದ್ದರು. ಠಾಣೆ ವ್ಯಾಪ್ತಿಯಲ್ಲಿ ಹುಡುಕಾಟ ನಡೆಸಿದಾಗ ಕಾಲೇಜೊಂದರ ಬಳಿಯ ಖುಲ್ಲಾ ಜಾಗದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಂಜುನಾಥ್ ಮೃತದೇಹ ಪತ್ತೆಯಾಯಿತು. ಅದರ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ’ ಎಂದೂ ಹೇಳಿವೆ.

ಪಾಲುದಾರಿಕೆಯಲ್ಲಿ ಮೊಬೈಲ್ ಮಳಿಗೆ?; ‘ಮಂಜುನಾಥ್, ಪವನ್ ಸೇರಿ ನಾಲ್ವರು ಸ್ನೇಹಿತರು, ಮೊಬೈಲ್ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದರು. ಮೊಬೈಲ್ ಮಾರಾಟ ಹಾಗೂ ದುರಸ್ತಿಯಲ್ಲಿ ಪರಿಣಿತರಾಗಿದ್ದರು. ಅದೇ ಕಾರಣಕ್ಕೆ ನಾಲ್ವರು ಸೇರಿಕೊಂಡು ಪಾಲುದಾರಿಕೆಯಲ್ಲಿ ಮೊಬೈಲ್ ಮಳಿಗೆಯೊಂದನ್ನು ಪ್ರಾರಂಭಿಸಿದ್ದರು. ಆದರೆ, ಮಳಿಗೆ ಪವನ್‌ ಹೆಸರಿನಲ್ಲಿತ್ತು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಲಾಕ್‌ಡೌನ್‌ನಿಂದಾಗಿ ಮಳಿಗೆಯಲ್ಲಿ ವ್ಯಾಪಾರ ಇರಲಿಲ್ಲ. ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿತ್ತು. ಹೀಗಾಗಿ, ಮಳಿಗೆ ಬಂದ್ ಮಾಡಲಾಗಿತ್ತು. ತಮ್ಮ ಪಾಲಿನ ಹಣ ನೀಡುವಂತೆ ಮಂಜುನಾಥ್ ಒತ್ತಾಯಿಸಿದ್ದರು. ಕಾಲಾವಕಾಶ ಪಡೆದಿದ್ದ ಪವನ್, ಹಣ ವಾಪಸು ನೀಡಿರಲಿಲ್ಲ. ಅದರಿಂದ ಮಂಜುನಾಥ್ ನೊಂದಿದ್ದರು ಎಂಬ ಮಾಹಿತಿ ಸದ್ಯದ ತನಿಖೆಯಿಂದ ಗೊತ್ತಾಗಿದೆ’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT