ಬೆಂಗಳೂರು: ಅಂಗವಿಕಲರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಬದ್ಧವಾಗಿದೆ. ಲೋಪಗಳು ಕಂಡುಬಂದರೆ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತದೆ ಎಂದು ಇಲಾಖೆಯ ನಿರ್ದೇಶಕ ಜಯವಿಭವ ಸ್ವಾಮಿ ಹೇಳಿದ್ದಾರೆ.

‘ಆಡಳಿತಕ್ಕೆ ಅಂಗವೈಕಲ್ಯ’ ಕುರಿತ ’ಒಳನೋಟ‘ ವರದಿಗೆ ಪ್ರತಿಕ್ರಿಯೆ ನೀಡಿರುವ ಅವರು, ಅಂಗವಿಕಲರಿಗೆ ಸೌಲಭ್ಯಗಳನ್ನು ತಲುಪಿಸಲು
ವಿಫಲವಾದ ಸಂಸ್ಥೆಗಳಿಂದ ಅನುದಾನ ವಸೂಲು ಮಾಡಿ, ಮುಖ್ಯಸ್ಥರಿಗೆ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಮಹಾಲೇಖಪಾಲರ ವರದಿಯನ್ನು ಆಧರಿಸಿ ಅದರಲ್ಲಿ ಉಲ್ಲೇಖಿಸಿರುವ ಐದು ಪ್ರಕರಣಗಳಲ್ಲಿಯೂ ಸಂಬಂಧಿಸಿದ ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸಲಾಗಿದೆ. ದಂಡ ವಸೂಲಾತಿ ಮಾಡಿದ್ದು, ಈಗಾಗಲೇ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಯೋಜನೆಗಳನ್ನು ಆನ್ಲೈನ್ ಮೂಲಕವೇ ಫಲಾನುಭವಿಗಳಿಗೆ ತಲುಪಿಸಲು ಅಂಗವಿಕಲರ ವಿಶಿಷ್ಟ ಗುರುತಿನ ಚೀಟಿ (ಯುಡಿಐಡಿ) ನೀಡಲಾಗುತ್ತಿದೆ. ಇದು, ಪೂರ್ಣ ಜಾರಿಗೆ ಬಂದ ನಂತರ ಅಕ್ರಮಗಳಿಗೆ ಅವಕಾಶವಿರುವುದಿಲ್ಲ. ಈವರೆಗೂ ಯೋಜನೆಗೆ ಈ ವರ್ಷದ ಮಾರ್ಚ್ನಿಂದ 1.3 ಲಕ್ಷ ಮಂದಿ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಆರು ತಿಂಗಳಲ್ಲಿ ಈ ಕಾರ್ಯ ಮುಗಿಯಲಿದೆ’ ಎಂದು ಯುಡಿಐಡಿ ನೀಡುವ ಕಾರ್ಯ ಮುಗಿಯಲಿದೆ’ ಎಂದಿದ್ದಾರೆ.

ಆಂಗವಿಕಲರಿಗೆ ಸೌಲಭ್ಯ ಕಲ್ಪಿಸುವ ಶಾಲೆಗಳಲ್ಲಿ ಮಾರ್ಗಸೂಚಿಯಂತೆ ಸವಲತ್ತು ಇಲ್ಲದಿರುವುದು ಕಂಡುಬಂದರೆ, ಅಂಥ ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗುತ್ತಿದೆ. ಕಡ್ಡಾಯವಾಗಿ ಮೂಲಸೌಕರ್ಯ ಒದಗಿಸಲು ತಾಕೀತು ಮಾಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.