ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ‘ಬ್ರಾಡ್‌ಕಾಂ’ ಕಂಪನಿಗೆ ಹುಸಿ ಬಾಂಬ್ ಬೆದರಿಕೆ

Published : 13 ಆಗಸ್ಟ್ 2024, 16:22 IST
Last Updated : 13 ಆಗಸ್ಟ್ 2024, 16:22 IST
ಫಾಲೋ ಮಾಡಿ
Comments

ಬೆಂಗಳೂರು: ಜೆ.ಪಿ. ನಗರದ 4ನೇ ಹಂತದಲ್ಲಿರುವ ‘ಬ್ರಾಡ್‌ಕಾಂ’ ಕಂಪನಿ ಕಚೇರಿಯಲ್ಲಿ ಬಾಂಬ್‌ ಇರಿಸಿರುವುದಾಗಿ ಮಂಗಳವಾರ ಇ–ಮೇಲ್ ಬಂದಿತ್ತು. ಪೊಲೀಸರ ಪರಿಶೀಲನೆ ನಂತರ, ಇದು ಹುಸಿ ಬೆದರಿಕೆ ಎಂಬುದು ಅರಿವಾಯಿತು.

ಬೆಳಿಗ್ಗೆ 11.50ಕ್ಕೆ ಬಂದ ಇ–ಮೇಲ್ ಬಗ್ಗೆ ಕಂಪನಿ ಸಿಬ್ಬಂದಿ, ಪೊಲೀಸರಿಗೆ ವಿಷಯ ತಿಳಿಸಿದರು. ಬಾಂಬ್​ ನಿಷ್ಕ್ರಿಯ ದಳ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಮೇ ತಿಂಗಳಲ್ಲಿ ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿರುವ ಮೂರು ಫೈವ್ ಸ್ಟಾರ್ ಹೋಟೆಲ್‌ಗಳಿಗೆ ಬಾಂಬ್ ಬೆದರಿಕೆಯ ಇ-ಮೇಲ್ ಬಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT