ಶುಕ್ರವಾರ, ಜನವರಿ 27, 2023
18 °C

ಮಾಸ್ಕ್‌ ಪರಿಶೀಲನೆ ವೇಳೆ ಖೋಟಾನೋಟು ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಸಲಿ ನೋಟುಗಳನ್ನು ಹೋಲುವ ರೀತಿಯಲ್ಲಿ ನಕಲಿ ನೋಟುಗಳನ್ನು ಜೆರಾಕ್ಸ್ ಮಾಡಿ ಚಲಾವಣೆ ಮಾಡಲು ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಮೈಕೊ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ತಮಿಳುನಾಡಿನ ಸುಮನ್ (36), ದೇವರಾಜನ್ (31) ಮತ್ತು ಮುನಿಶೇಖರ್ (29) ಬಂಧಿತರು.  ಅವರಿಂದ ₹2 ಸಾವಿರ ಮುಖಬೆಲೆಯ 389 ಖೋಟಾ ನೋಟುಗಳನ್ನು ಹಾಗೂ ಕಾರು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದರು.

‘ಗುರುವಾರ ಸಂಜೆ 6 ಗಂಟೆಗೆ ಆರೋಪಿಗಳು ಕಾರಿನಲ್ಲಿ ಬಿಟಿಎಂ ಲೇಔಟ್‌ನಿಂದ ಹೊರಟಿದ್ದರು. ಮಾಸ್ಕ್ ಧರಿಸಿರಲಿಲ್ಲ. ಕರ್ತವ್ಯದಲ್ಲಿದ್ದ ಪಿಎಸ್‌ಐ ರಾಜ್‌ಕುಮಾರ್ ಜೋಡಟ್ಟಿ ಮತ್ತು ಹೆಡ್ ಕಾನ್‌ಸ್ಟೆಬಲ್ ಪ್ರಮೋದ್, ಕಾರನ್ನು ತಡೆದು ಮಾಸ್ಕ್ ಪರಿಶೀಲನೆ ನಡೆಸಿದ್ದರು. ಅದೇ ವೇಳೆಯೇ ಕಾರಿನಲ್ಲಿ ಖೋಟಾ ನೋಟುಗಳ ಕಂತೆ ಕಂಡಿತ್ತು’ ಎಂದೂ ಅವರು ಹೇಳಿದರು.

‘ತಮಿಳುನಾಡಿನಲ್ಲಿ ಜೆರಾಕ್ಸ್ ಮೂಲಕ ಖೋಟಾ ನೋಟು ತಯಾರಿಸುತ್ತಿದ್ದ ಆರೋಪಿಗಳು, ನಗರಕ್ಕೆ ತಂದು ಚಲಾವಣೆ ಮಾಡುತ್ತಿದ್ದರು. ಸದ್ಯ ಜಪ್ತಿ ಮಾಡಿರುವ ನೋಟುಗಳನ್ನು ಆರೋಪಿಗಳು ಎಲ್ಲಿಗೆ ಸಾಗಿಸುತ್ತಿದ್ದರು ಎಂಬ ಮಾಹಿತಿ ಗೊತ್ತಾಗಿಲ್ಲ. ಆರೋಪಿಗಳನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುವುದು’ ಎಂದೂ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು