ಗುರುವಾರ , ಜೂನ್ 17, 2021
24 °C

ರಾಜ್ಯಕ್ಕೆ ಉಗ್ರರು ನುಸುಳಿದ್ದಾರೆ: ಹುಸಿ ಕರೆ ಮಾಡಿದ ಮಾಜಿ ಸೈನಿಕನ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಉಗ್ರರು ನುಸುಳಿದ್ದಾರೆ ಎಂದು ಪೊಲೀಸ್ ನಿಯಂತ್ರಣ ಕೊಠಡಿಗೆ ಹುಸಿ ಕರೆ ಮಾಡಿದ್ದ ಆರೋಪದಡಿ ಮಾಜಿ ಸೈನಿಕ ಸುಂದರಮೂರ್ತಿ ಎಂಬುವರನ್ನು ಅವಲಹಳ್ಳಿ ಹಾಗೂ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ‌.

ಅವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮುನಿವೆಂಕಟೇಶ್ವರ ಲೇಔಟ್ ಮನೆಯಲ್ಲಿ ಸುಂದರಮೂರ್ತಿ ಬಂಧಿಸಿದರು. ಕಳೆದ ರಾತ್ರಿ 9 ಗಂಟೆ ಸುಮಾರಿಗೆ ಬಂಧಿಸಿ ವಿಚಾರಣೆ ನಡೆಸಿದರು.

ಇದನ್ನೂ ಓದಿ: ರಾಮನಾಥಪುರದಲ್ಲಿ 19 ಉಗ್ರರಿದ್ದಾರೆ ಎಂದು ಡಿಜಿಪಿ ಬರೆದ ಪತ್ರ ವೈರಲ್

'ನನ್ನ ಮನಸ್ಸಿಗೆ ಹಾಗೇ ಬಂತು ಕರೆ ಮಾಡಿದೆ. ಈಗ ಶ್ರೀಲಂಕಾದಲ್ಲಿ ಬಾಂಬ್ ಸ್ಪೋಟ ಆಗಿತ್ತು. ಹೀಗಾಗಿ ಅದೇ ರೀತಿ ಆಗಬಹುದು ಎಂದು ಊಹಿಸಿ ಕರೆ ಮಾಡಿದೆ' ಎಂದ ಆರೋಪಿ ಹೇಳಿದ್ದಾನೆ.

ಕೋಲಾರ ಎಸ್ಪಿ ಹಾಗೂ ಬೆಂಗಳೂರು ಗ್ರಾಮಾಂತರ ಪೊಲೀಸರಿಂದ ರಾತ್ರಿ ತೀವ್ರ ಹುಡುಕಾಟ ನಡೆದಿತ್ತು. ಮೊಬೈಲ್ ಕರೆ ಲೊಕೇಶನ್‌ ಆಧರಿಸಿ ಅವರನ್ನು ಬಂಧಿಸಲಾಗಿದೆ.

ಸೈನ್ಯದಲ್ಲಿ 20 ವರ್ಷ ಸೇವೆ ಸಲ್ಲಿಸಿದ್ದ ಆರೋಪಿ, ನಿವೃತ್ತಿ ಬಳಿಕ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ‌. ಸುಂದರಮೂರ್ತಿ ಅವರ ಇಬ್ಬರು ಮಕ್ಕಳು ಸೈನಿಕರಾಗಿದ್ದಾರೆ. ಒಬ್ಬ ಮಗ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮನಾಗಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು