ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆಯ ಎಸ್‌ಟಿಪಿಯಲ್ಲಿ ಭ್ರೂಣ ಪತ್ತೆ

Last Updated 9 ಡಿಸೆಂಬರ್ 2019, 11:24 IST
ಅಕ್ಷರ ಗಾತ್ರ

ಬೆಂಗಳೂರು: ಹೆಬ್ಬಾಳ ಬಳಿಯ ಆಸ್ಟರ್ ಸಿಎಂಐ ಆಸ್ಪತ್ರೆಯ ಕೊಳಚೆ ನೀರು ಶುದ್ಧೀಕರಣ ಘಟಕದಲ್ಲಿ (ಎಸ್‌ಟಿಪಿ) 4 ತಿಂಗಳ ಭ್ರೂಣ ಪತ್ತೆಯಾಗಿದ್ದು, ಆ ಸಂಬಂಧ ಕೊಡಿಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಆಸ್ಪತ್ರೆಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ನಿತೇಶ್ ಶೆಟ್ಟಿ ಅವರು ದೂರು ನೀಡಿದ್ದಾರೆ. ಭ್ರೂಣ ಅಥವಾ ಶಿಶುವನ್ನು ಬಿಸಾಡಿದ ಆರೋಪದಡಿ (ಐಪಿಸಿ 318) ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಕೆಲಸಗಾರ ಯೋಗೇಶ್‌ ಎಂಬುವರು ಇದೇ 5ರಂದು ಬೆಳಿಗ್ಗೆ ಆಸ್ಪತ್ರೆಯ ಎಸ್‌ಟಿಪಿ ಸ್ವಚ್ಛ ಮಾಡುತ್ತಿದ್ದರು. ಅದೇ ಸಂದರ್ಭದಲ್ಲೇ 300 ಗ್ರಾಂ ತೂಕದ ಗಂಡು ಮಗುವಿನ ಭ್ರೂಣ ಕಂಡಿತ್ತು’ ಎಂದರು.

‘ಮಗುವಿನ ಜನನವನ್ನು ಮುಚ್ಚಿಡುವ ಸಲುವಾಗಿ ಯಾರೋ ಭ್ರೂಣವನ್ನು ಎಸ್‌ಟಿಪಿಯಲ್ಲಿ ಎಸೆದಿದ್ದಾರೆ. ಸದ್ಯ ಭ್ರೂಣವನ್ನು ಶವಾಗಾರದಲ್ಲಿ ಇರಿಸಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT