ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಡಿಜಿಟಲ್ ಸ್ಕ್ಯಾನಿಂಗ್‌ನಲ್ಲಿ ಅಕ್ರಮ, ದೂರು ದಾಖಲು

Published 18 ಫೆಬ್ರುವರಿ 2024, 16:16 IST
Last Updated 18 ಫೆಬ್ರುವರಿ 2024, 16:16 IST
ಅಕ್ಷರ ಗಾತ್ರ

ಬೆಂಗಳೂರು: ಆರ್.ಆರ್. ನಗರ ವ್ಯಾಪ್ತಿಯಲ್ಲಿ ಆಸ್ತಿ ದಾಖಲೆ ಡಿಜಿಟಲ್ ಸ್ಕ್ಯಾನಿಂಗ್ ವೇಳೆ ಅಕ್ರಮ ಮಾಡಲು ಮುಂದಾದ ಅಧಿಕಾರಿ ಹಾಗೂ ಅಕ್ರಮ ಆಸ್ತಿಯ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ.

ಆರ್‌ಆರ್ ನಗರ ವಲಯದಲ್ಲಿನ ಉಪ ವಿಭಾಗದ ಸಹ ಕಂದಾಯ ಅಧಿಕಾರಿ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾದ ಓಂಕಾರಮೂರ್ತಿ, ವಾರ್ಡ್ ನಂ.160ರಲ್ಲಿನ ಹಲಗೆವಡೇರಹಳ್ಳಿಯಲ್ಲಿ ‘ಎ’ ರಿಜಿಸ್ಟ್ರರ್ ಪುಸ್ತಕ ಡಿಜಿಟಲ್ ಸ್ಕ್ಯಾನಿಂಗ್ ಮಾಡುವ ಸಂದರ್ಭದಲ್ಲಿ ಅಕ್ರಮವಾಗಿ ವ್ಯಕ್ತಿಯೊಬ್ಬರ ಆಸ್ತಿ ವಿವರವನ್ನು ನಮೂದು ಮಾಡಿ ಸಿಕ್ಕಿ ಬಿದ್ದಿದ್ದಾರೆ.

ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿ ಅರುಣ್ ಕುಮಾ‌ರ್ ಅವರು ಓಂಕಾರಮೂರ್ತಿ ಹಾಗೂ ಅಕ್ರಮ ನಮೂದಾದ ಆಸ್ತಿ ಮಾಲೀಕ ಯತಿನ್ ಗೌತಮ್ ವಿ. ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

2023ರ ನವೆಂಬ‌ರ್ ತಿಂಗಳಿನಿಂದ ಆ‌ರ್.ಆ‌ರ್.ನಗರ ಕಚೇರಿಯಲ್ಲಿ, ಆಸ್ತಿ ವಹಿಗಳನ್ನು ಕಂಪ್ಯೂಟರೀಕರಣ ಮಾಡಲು ಸ್ಕ್ಯಾನ್ ಮಾಡಲಾಗುತ್ತಿತ್ತು. ಹಲಗೆವಡೇರಹಳ್ಳಿ, ಗ್ರಾಮಕ್ಕೆ ಸಂಬಂಧಿಸಿದ ‘ಎ’ ಖಾತಾ ವಹಿ ಪುಸ್ತಕವನ್ನು ಸ್ಕ್ಯಾನ್ ಮಾಡುವಾಗ ವ್ಯಾಲ್ಯೂಮ್ ನಂ. 38ರ ‘ಎ’ ಖಾತಾ ಪುಸ್ತಕದ ಪುಟ ಸಂಖ್ಯೆ 122ರಲ್ಲಿ ಕ್ರಮ ಸಂಖ್ಯೆ 7362ರಲ್ಲಿ ಯಾವುದೇ ಹೆಸರು ಇರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ಪ್ರಥಮ ದರ್ಜೆ ಸಹಾಯಕರಾಗಿರುವ ವಿಷಯ ನಿರ್ವಾಹಕ ಓಂಕಾರಮೂರ್ತಿ ಖಾಲಿ ಇದ್ದ ಸ್ಥಳದಲ್ಲಿ 66/1 ಹಾಗೂ 9/5 ಎಂಬ, 40*60 ಅಳತೆಯ ನಿವೇಶನದ ವಿವರ ಹಾಗೂ ಅದರ ಆಸ್ತಿ ಮಾಲೀಕ ಯತಿನ್ ಗೌತಮ್ ವಿ. ಎಂದು ನಮೂದಿಸಿದ್ದರು. ಫೆ.12ರಂದು ಸಹಾಯಕ ಕಂದಾಯ ಅಧಿಕಾರಿ ಅರುಣ್ ಕುಮಾರ್ ಪರಿಶೀಲನೆ ನಡೆಸಿದಾಗ ಈ ಅಕ್ರಮ ಗಮನಕ್ಕೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT