ಬೆಂಗಳೂರು: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ– 2025ರಂತೆ ನಗರ ಜಿಲ್ಲೆಯ ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಒಟ್ಟು 1.02 ಕೋಟಿ ಮತದಾರರಿದ್ದಾರೆ.

2024ರ ಜನವರಿ 22ರ ಮತದಾರರ ಅಂತಿಮ ಪಟ್ಟಿಯಂತೆ ನಗರದಲ್ಲಿ 98.43 ಲಕ್ಷ ಮತದಾರರಿದ್ದರು. ಏಪ್ರಿಲ್ನಲ್ಲಿ ನಡೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ 1.01 ಕೋಟಿ ಮತದಾರರಿದ್ದರು. ಇದಕ್ಕೆ ಹೋಲಿಸಿದರೆ, 2025ರ ಜನವರಿ 6ರಂದು ಪ್ರಕಟಿಸಿರುವ ಮತದಾರರ ಅಂತಿಮ ಪಟ್ಟಿಯಲ್ಲಿ ಈ ಸಂಖ್ಯೆ ಒಂದು ಲಕ್ಷದಷ್ಟು ವೃದ್ಧಿಯಾಗಿದೆ. ಅಕ್ಟೋಬರ್ 29ರಂದು ಪ್ರಕಟವಾಗಿದ್ದ ಕರಡು ಪಟ್ಟಿಗಿಂತ 23,488 ಮತದಾರರು ಹೆಚ್ಚಾಗಿದ್ದಾರೆ.

‘ಮತದಾರರ ಅಂತಿಮ ಪಟ್ಟಿಯನ್ನು ನಗರದ ಎಲ್ಲ 28 ವಿಧಾನಸಭಾ ಕ್ಷೇತ್ರಗಳ ಮತದಾರರ ನೋಂದಣಾಧಿಕಾರಿ ಕಚೇರಿ, ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿ ಹಾಗೂ ವಾರ್ಡ್ ಕಚೇರಿಗಳಲ್ಲಿ ಪ್ರಕಟಿಸಲಾಗಿದೆ. ಸಾರ್ವಜನಿಕರಿಗೆ ಮತದಾರರ ಪಟ್ಟಿಯನ್ನು ಪರಿಶೀಲಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.

ಮತದಾರರ ಅಂತಿಮ ಪಟ್ಟಿಯನ್ನು ಮುಖ್ಯ ಚುನಾವಣಾಧಿಕಾರಿ ಕಚೇರಿಯ ವೆಬ್ಸೈಟ್ (www.ceokarnataka.kar.nic.in) ಮತ್ತು ಬಿಬಿಎಂಪಿ ವೆಬ್ಸೈಟ್ (www.bbmp.gov.in) ನಲ್ಲೂ ಪರಿಶೀಲಿಸಿಕೊಳ್ಳಬಹುದು. ಮೊಬೈಲ್ನಲ್ಲಿ ವಿಎಚ್ಎ (Voter Helpline App) ಅಥವಾ ವೆಬ್ ಪೋರ್ಟಲ್ Voters.eci.gov.in ನಲ್ಲೂ ಮಾಹಿತಿಯನ್ನು ಖಾತರಿಪಡಿಸಿಕೊಳ್ಳಬಹುದು. e-EPIC ಆ್ಯಪ್ನಲ್ಲಿ ಮತಗಟ್ಟೆ, ಶೇಕಡವಾರು ಮತದಾನದ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.

43,902 ಮತದಾರರು ಸೇರ್ಪಡೆಯಾಗಿದ್ದು, ಅದರಲ್ಲಿ 22,755 ಮತದಾರರ ಮಾಹಿತಿಯನ್ನು ತಿದ್ದುಪಡಿ ಮಾಡಲಾಗಿದೆ. 20,414 ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಪುಲಕೇಶಿನಗರ ವಿಧಾನಸಭೆ ಕ್ಷೇತ್ರಲ್ಲಿ 1,385, ಯಶವಂತಪುರದಲ್ಲಿ 1,273, ಮಹದೇವಪುರದಲ್ಲಿ 1,224, ಬ್ಯಾಟರಾಯನಪುರದಲ್ಲಿ 1,083, ಬೆಂಗಳೂರು ದಕ್ಷಿಣದಲ್ಲಿ 1,078, ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದಲ್ಲಿ 1,014, ಆನೇಕಲ್ ವಿಧಾನಸಭೆ ಕ್ಷೇತ್ರದಲ್ಲಿ 1,553 ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಮಾಹಿತಿ ನೀಡಿದರು.

ಚುನಾವಣಾ ವಿಭಾಗದ ವಿಶೇಷ ಆಯುಕ್ತರಾದ ಆರ್. ಸೆಲ್ವಮಣಿ, ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಗಳಾದ ವಿನೋತ್ ಪ್ರಿಯಾ, ಅವಿನಾಶ್ ಮೆನನ್ ರಾಜೇಂದ್ರನ್, ಸ್ನೇಹಲ್, ಜಗದೀಶ್, ಚುನಾವಣಾ ವಿಭಾಗದ ಸಹಾಯಕ ಆಯುಕ್ತ ಶರಣಪ್ಪ ಉಪಸ್ಥಿತರಿದ್ದರು.

95,391 ಯುವ ಮತದಾರರು

ನಗರದಲ್ಲಿ ಮತದಾರರ ಕರಡು ಪಟ್ಟಿಯಲ್ಲಿ 86,044 ಯುವ ಮತದಾರರಿದ್ದರು, ಅಂತಿಮ ಪಟ್ಟಿಯಲ್ಲಿ ಇವರ ಸಂಖ್ಯೆ ಹೆಚ್ಚಾಗಿದ್ದು, 95,391 ಆಗಿದೆ. 1,712 ಸೇವಾ, 32,505 ಅಂಗವಿಕಲ ಮತದಾರರಿದ್ದಾರೆ. 2,294 ಅನಿವಾಸಿ ಭಾರತೀಯ ಮತ ದಾರರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.