ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜರಾಜೇಶ್ವರಿನಗರ | 'ಫ್ಲೆಕ್ಸ್‌, ಬ್ಯಾನರ್‌ ಹಾವಳಿ: ತೆರವಿಗೆ ಆಗ್ರಹ'

Published 11 ಜೂನ್ 2024, 15:53 IST
Last Updated 11 ಜೂನ್ 2024, 15:53 IST
ಅಕ್ಷರ ಗಾತ್ರ

ರಾಜರಾಜೇಶ್ವರಿನಗರ: ಫ್ಲೆಕ್ಸ್‌, ಬ್ಯಾನರ್‌ ನಿಷೇಧವಿದ್ದರೂ, ಎಲ್ಲೆಡೆ ಅವುಗಳು ರಾರಾಜಿಸುತ್ತಿವೆ, ನಗರದ ಸೌಂದರ್ಯವನ್ನು ಹಾಳು ಮಾಡುತ್ತಿವೆ ಎಂದು ನಾಗರಿಕರು ದೂರಿದ್ದಾರೆ.

ಸುಮನಹಳ್ಳಿಯಿಂದ ಕೊಟ್ಟಿಗೆಪಾಳ್ಯ, ಮಾಗಡಿ ರಸ್ತೆಯ ವರ್ತುಲ ರಸ್ತೆಯಿಂದ ಕೊಟ್ಟಿಗೆಪಾಳ್ಯ, ಬಿಡಿಎ ಕಾಂಪ್ಲೆಕ್ಸ್ ವೃತ್ತ, ಕೆಂಗುಂಟೆ ಸರ್ಕಲ್‌, ಮಲ್ಲತಹಳ್ಳಿ, ಬೆಂಗಳೂರು ವಿಶ್ವವಿದ್ಯಾಲಯ ಕ್ವಾರ್ಟರ್ಸ್‌ ಸುತ್ತಮುತ್ತಲಿನ ರಸ್ತೆ, ಸರ್ಕಲ್‌ಗಳಲ್ಲಿ ರಾಜಕೀಯ ನಾಯಕರಿಗೆ ಶುಭ ಕೋರಿರುವ ನೂರಾರು ಫ್ಲೆಕ್ಸ್‌ ರಾರಾಜಿಸುತ್ತಿವೆ. ಫ್ಲೆಕ್ಸ್‌ ತೆರವುಗೊಳಿಸುವ ಬಗ್ಗೆ ಬಿಬಿಎಂಪಿ ಕ್ರಮ ಕೈಗೊಂಡಿಲ್ಲ ಎಂದು ಅನಸೂಯ, ದಿವ್ಯ, ರಾಜೇಗೌಡ ದೂರಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಬಿಬಿಎಂಪಿ ರಾಜರಾಜೇಶ್ವರಿನಗರ ವಲಯ ಆಯುಕ್ತ ಶಿವಾನಂದ ಕಾಪಸಿ, ‘ಅನಧಿಕೃತ ಫ್ಲೆಕ್ಸ್ ಅಳವಡಿಸಿರುವ ಕುರಿತು ಮಾಹಿತಿಗಳು ಬಂದಿವೆ. ಎರಡು ದಿನಗಳ ಒಳಗೆ ತೆರವುಗೊಳಿಸಲು ಸಹಾಯಕ ಕಂದಾಯ ಅಧಿಕಾರಿ, ಎಂಜಿನಿಯರ್‌ಗಳಿಗೆ ಆದೇಶ ನೀಡಲಾಗಿದೆ. ಅಳವಡಿಸಿರುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ’ ಎಂದು ತಿಳಿಸಿದರು.

 ದೀಪಾ ಕಾಂಪ್ಲೆಕ್ಸ್ ಬಳಿ ಅನಧಿಕೃತ ಫ್ಲೆಕ್ಸ್

ದೀಪಾ ಕಾಂಪ್ಲೆಕ್ಸ್ ಬಳಿ ಅನಧಿಕೃತ ಫ್ಲೆಕ್ಸ್

ಕೆಂಗುಂಟೆ ಸರ್ಕಲ್

ಕೆಂಗುಂಟೆ ಸರ್ಕಲ್

 ಬೈಟು ಕಾಫಿ ನಾಗರಬಾವಿ

ಬೈಟು ಕಾಫಿ ನಾಗರಬಾವಿ

ಬಿಡಿಎ ಕಾಂಪ್ಲೆಕ್ಸ್ ನಾಗರಬಾವಿ

ಬಿಡಿಎ ಕಾಂಪ್ಲೆಕ್ಸ್ ನಾಗರಬಾವಿ

ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿ ಕಚೇರಿ ನಾಗರಬಾವಿ

ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿ ಕಚೇರಿ ನಾಗರಬಾವಿ

 ಬಿಡಿಎ ಕಾಂಪ್ಲೆಕ್ಸ್

ಬಿಡಿಎ ಕಾಂಪ್ಲೆಕ್ಸ್

 ಕೊಟ್ಟಿಗೆಪಾಳ್ಯ ಜಂಕ್ಷನ್

ಕೊಟ್ಟಿಗೆಪಾಳ್ಯ ಜಂಕ್ಷನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT