ಬೆಂಗಳೂರು: ದೊಡ್ಡಗುಬ್ಬಿ ಗ್ರಾಮದ ಆರ್ಆರ್ಸಿ ರಸ್ತೆ ಹೋಂ ಆಫ್ ಹೋಪ್ಸ್ನಲ್ಲಿ ನಿರ್ಮಿಸಿರುವ ವಿದೇಶಿಯರ ಬಂಧನ ಕೇಂದ್ರವನ್ನು ಅ.30ರಂದು ಸಂಜೆ 4.30ಕ್ಕೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸೀಮಾಂತ್ ಕುಮಾರ್ ಉದ್ಘಾಟಿಸಲಿದ್ದಾರೆ.

ನ್ಯೂ ಆರ್ಕ್ ಮಿಷನ್ ಆಫ್ ಇಂಡಿಯಾ ಸಂಸ್ಥೆಯು ಸರ್ಕಾರದ ಸಹಕಾರದೊಂದಿಗೆ ಮೂರು ವರ್ಷಗಳಿಂದ ಸುಮಾರು 30 ಬೆಡ್ಗಳೊಂದಿಗೆ ಸಣ್ಣದಾಗಿ ವಿದೇಶಿಯರ ಬಂಧನ ಕೇಂದ್ರ ನಡೆಸುತ್ತಿತ್ತು. ಈಗ ಅದನ್ನು 200 ಹಾಸಿಗೆಯ ಕೇಂದ್ರವನ್ನಾಗಿ ಪರಿವರ್ತಿಸಲಾಗಿದೆ ಎಂದು ನ್ಯೂ ಆರ್ಕ್ ಮಿಷನ್ ಆಫ್ ಇಂಡಿಯಾ ಸಂಸ್ಥಾಪಕ ಆಟೊ ರಾಜ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪಾಸ್ಪೋರ್ಟ್ ಅವಧಿ ಮುಗಿದ ಮತ್ತು ಅಕ್ರಮವಾಗಿ ವಾಸವಾಗಿರುವ ವಿದೇಶಿಯರನ್ನು ಪೊಲೀಸರು ಬಂಧಿಸಿದಾಗ ಅವರಿಗೆ ಇಲ್ಲಿ ವಸತಿ ಕಲ್ಪಿಸಲಾಗುತ್ತದೆ. ಬಳಿಕ ಎಫ್ಆರ್ಆರ್ಒ ಮೂಲಕ ಅವರ ದೇಶಕ್ಕೆ ಕಳುಹಿಸಲಾಗುತ್ತಿದೆ. ಇಲ್ಲಿಯವರೆಗೆ 325ಕ್ಕೂ ಅಧಿಕ ವಿದೇಶಿಯರನ್ನು ಈ ರೀತಿ ಗಡಿಪಾರು ಮಾಡಲಾಗಿದೆ. ಪ್ರಸ್ತುತ 85 ವಿದೇಶಿಯರಿದ್ದಾರೆ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.