ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

8ರಿಂದ ‘ಫ್ಯೂಚರ್ ಡಿಸೈಬ್’ ಸಮಾವೇಶ: ಅಶ್ವತ್ಥ ನಾರಾಯಣ

Last Updated 3 ಡಿಸೆಂಬರ್ 2022, 6:09 IST
ಅಕ್ಷರ ಗಾತ್ರ

ಬೆಂಗಳೂರು: ನಗರ ಅಶೋಕ ಹೋಟೆಲ್‌ನಲ್ಲಿ ಇದೇ 8ರಿಂದ 10ರವರೆಗೆ ‘ಫ್ಯೂಚರ್ ಡಿಸೈನ್’ ಸಮಾವೇಶ ನಡೆಯಲಿದ್ದು, ಈ ಸಮಾವೇಶವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ’ ಎಂದು ಐಟಿ-ಬಿಟಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.

‘ನ. 11ರಿಂದ ನಡೆಯುತ್ತಿರುವ ‘ಬೆಂಗಳೂರು ಡಿಸೈನ್ ಫೆಸ್ಟಿವಲ್’ನ ಮುಂದುವರಿದ ಭಾಗವಾಗಿ ಈ ಸಮಾವೇಶವನ್ನು ಏರ್ಪಡಿಸಲಾಗುತ್ತಿದೆ. ಅಂತರರಾಷ್ಟ್ರೀಯ ಕೌಶಲಾಭಿವೃದ್ಧಿ ಸಮಿತಿ, ಭಾರತೀಯ ವಿನ್ಯಾಸಗಾರರ ಒಕ್ಕೂಟ, ಸಿಐಐ ಮತ್ತು ಜೈನ್ ಸ್ಕೂಲ್ ಆಫ್ ಆರ್ಕಿಟೆಕ್ಟ್ ಸಹಯೋಗದಲ್ಲಿ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ‘ ನೀಡುತ್ತಿವೆ’ ಎಂದು ಅವರು ಹೇಳಿದರು.

‘ವಿಶ್ವದಾದ್ಯಂತದ 300ಕ್ಕೂ ಹೆಚ್ಚು ಡಿಸೈನ್ ಪರಿಣತರು ಈ ಸಮಾವೇಶದಲ್ಲಿ ಮಾತನಾಡಲಿದ್ದು, 3 ಸಾವುರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ಇದರಲ್ಲಿ ವರ್ಲ್ಡ್‌ ಡಿಸೈನ್ ಆರ್ಗನೈಸೇಶನ್, ವರ್ಲ್ಡ್ ಡಿಸೈನ್ ಕೌನ್ಸಿಲ್‌, ಬೆಂಗಳೂರು ಡಿಸೈನ್ ಫೆಸ್ಟಿವಲ್ ಮತ್ತು ಬೆಂಗಳೂರು ಡಿಸೈನ್ ಸಪ್ತಾಹದ ಪ್ರತಿನಿಧಿಗಳು ಇರಲಿದ್ದಾರೆ’ ಎಂದು ಅವರು ಹೇಳಿದ್ದಾರೆ.

‘ತಂತ್ರಜ್ಞಾನ ಮತ್ತು ವಿನ್ಯಾಸ ಎರಡೂ ಒಂದಕ್ಕೊಂದು ಅವಿಭಾಜ್ಯ ಅಂಗವಾಗಿವೆ. ಇದರ ಮೂಲಕ ಬಿಗ್ ಡೇಟಾ ಮತ್ತಿತರ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಒಟ್ಟು ಮೂರು ಟ್ರ್ಯಾಕ್‌ಗಳಲ್ಲಿ ಸಮಾವೇಶದ ಗೋಷ್ಠಿಗಳು ನಡೆಯಲಿವೆ. ಇದರಲ್ಲಿ ವಿನ್ಯಾಸದ ಆಯಾಮಗಳು, ಒಳಾಂಗಣ ವಿನ್ಯಾಸ, ವಾಸ್ತುಶಿಲ್ಪ, ಮೆಟಾವರ್ಸ್ ಮತ್ತು ಎವಿಜಿಸಿ ಮುಂತಾದವನ್ನು ಕುರಿತು ವಿಚಾರ ವಿನಿಮಯ ನಡೆಯಲಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಸಮಾವೇಶಕ್ಕೆ ವಿದ್ಯಾರ್ಥಿಗಳು ಮತ್ತು ಸಾಮಾನ್ಯರ ವಿಭಾಗಗಳಲ್ಲಿ ಟಿಕೆಟ್ ಆಧಾರಿತ ಪ್ರವೇಶಾವಕಾಶ ಇದೆ. ಇದರಲ್ಲಿ ಡಿಸೈನ್ ಪ್ರದರ್ಶನ ಮೇಳ ಕೂಡ ಇರಲಿದೆ. ಹೆಚ್ಚಿನ ಮಾಹಿತಿಗೆ https://bengalurudesign festival.org/ ವೆಬ್‌ಸೈಟ್‌ ನೋಡಬಹುದು’ ಎಂದು ಸಚಿವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT