ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಭವನದಲ್ಲಿ ಗಾಂಧಿ ಜಯಂತಿ: ನೃತ್ಯ, ಗೀತ ನಮನ

Published 2 ಅಕ್ಟೋಬರ್ 2023, 15:52 IST
Last Updated 2 ಅಕ್ಟೋಬರ್ 2023, 15:52 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಜನ್ಮದಿನದ ಅಂಗವಾಗಿ ರಾಜಭವನದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ‘ಗಾಂಧಿ ಜಯಂತಿ ಸತ್ಯ ಮತ್ತು ಅಹಿಂಸಾ ಮಹೋತ್ಸವ’ ಹಮ್ಮಿಕೊಳ್ಳಲಾಯಿತು.

ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರು ಗಾಂಧಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು. ನೃತ್ಯ ಹಾಗೂ ಗೀತೆಗಳ ಮೂಲಕ ಮಹಾತ್ಮ ಗಾಂಧೀಜಿಗೆ ನಮನ ಸಲ್ಲಿಸಲಾಯಿತು.

ದೀಪಿಕಾ ಶ್ರೀಕಾಂತ್ ಮತ್ತು ತಂಡದವರು ‘ವೈಷ್ಣವ ಜನತೋ...’, ‘ರಘುಪತಿ ರಾಘವ ರಾಜ ರಾಮ್’ ಭಜನೆ ಹಾಡಿದರು. ನೇಹಾ ಸುಳ್ಳದ್ ಭರತನಾಟ್ಯ, ಟಿಶಾ ಶರ್ಮಾ, ರುದ್ರಿಕಾ ಶರ್ಮಾ ಹಾಗೂ ರುದ್ರಾಂಶಿ ಶರ್ಮಾ ವಿವಿಧ ಗಣಪತಿ ವಂದನಾ ನೃತ್ಯ ರೂಪಕವನ್ನು ಪ್ರಸ್ತುತ ಪಡಿಸಿದರು.

ನಾಟ್ಯ ನಿನಾದ ಅಕಾಡೆಮಿಯ ಕುಚಿಪುಡಿ ತಂಡದಿಂದ ‘ಪುಷ್ಪಾಂಜಲಿ ಹಾಗೂ ಭಾರತ ಮಾತೆ ಭುವನ ಶ್ರೇಷ್ಠೆ ನಮೋಸ್ತುತೆ’ ನೃತ್ಯ ರೂಪಕ ಪ್ರದರ್ಶನ ನಡೆಯಿತು.

ಉರ್ಜಾ ಸೆಂಟರ್ ಆಫ್ ಪರ್ಫಾಮಿಂಗ್ ಆರ್ಟ್ಸ್ ವತಿಯಿಂದ ವಂದೇ ಮಾತರಂ ಗೀತೆಗೆ ಸೋಹಿನಿ ಬೋಸ್ ಬ್ಯಾನರ್ಜಿ ತಂಡದಿಂದ ಒಡಿಸ್ಸಿ ಶೈಲಿಯ ನೃತ್ಯ ಪ್ರದರ್ಶನ, ತಾತಗುಣಿ ಜ್ಯೋತಿ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ವತಿಯಿಂದ ‘ನಮೋ ಭಾರತಾಂಬೆ’ ನೃತ್ಯಗಳು ಕಾರ್ಯಕ್ರಮಕ್ಕೆ ಮೆರಗು ನೀಡಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT