ಶುಕ್ರವಾರ, ಫೆಬ್ರವರಿ 28, 2020
19 °C
ಬಿಜೆಪಿಯವರು ಹಲಕಾ ಕೆಲಸ ಮಾಡುತ್ತಿದ್ದಾರೆ

ಗಾಂಧಿಯ ಕೊಂದಿದ್ದು ಆರ್‌ಎಸ್‌ಎಸ್ ಮೂಲದ‌ವರು: ಎಚ್.ಎಸ್.ದೊರೆಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 'ಮಹಾತ್ಮ ಗಾಂಧೀಜಿ ಅವರನ್ನು ಆರ್‌ಎಸ್ಎಸ್‌ ಮೂಲದ‌ವರೇ ಹತ್ಯೆ ಮಾಡಿದ್ದಾರೆ' ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಹೇಳಿದರು.

ಕರ್ನಾಟಕ ಗಾಂಧಿ ಸ್ಮಾರಕ ನಿಧಿ ನಗರದಲ್ಲಿ ಬುಧವಾರ ಆಯೋಜಿಸಿದ್ದ ಬಾ-ಬಾಪು 150ನೇ ಜನ್ಮ ವರ್ಷಾಚರಣೆ ಸರ್ವೋದಯ ದಿನಾಚರಣೆ, ಕಾಲೇಜು ಪ್ರಾಧ್ಯಾಪಕರಿಗಾಗಿ ರಾಜ್ಯ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಅವರು‌ ಮಾತನಾಡಿದರು.

'ಗಾಂಧಿ ಹಂತಕ ಗೋಡ್ಸೆ, ಗಾಂಧಿಯನ್ನು ಹತ್ಯೆಗೈಯುವ 15 ದಿನಗಳಿಗಿಂತ ಮೊದಲು ಬೆಂಗಳೂರಿಗೆ ಬಂದಾಗ ಆರ್‌ಎಸ್‌ಎಸ್  ಸಂಘಟಕರೊಬ್ಬರ ಮನೆಯಲ್ಲಿ ಉಳಿದುಕೊಂಡಿದ್ದರೆಂದರೆ ಇದು ಸಂಘ ಪರಿವಾರದ ಕೃತ್ಯವಲ್ಲವೇ? ' ಎಂದು ಪ್ರಶ್ನಿಸಿದರು.

'ಆದರೆ, ಸಂಘ ಪರಿವಾರ ಗೋಡ್ಸೆ ನಮ್ಮವನಲ್ಲ ಎಂದು ಹೇಳುತ್ತಿದೆ. ಬಿಜೆಪಿಯವರು ಹಲಕಾ ಕೆಲಸ ಮಾಡುತ್ತಿದ್ದಾರೆ' ಎಂದು ದೂರಿದರು.

'ಸರ್ಕಾರ ನಾಚಿಕೆಗೇಡಿ ಕೆಲಸ ಮಾಡುತ್ತಿದೆ. ಮದ್ಯಪಾನ ನಿಷೇಧಕ್ಕಾಗಿ ಪಾದಯಾತ್ರೆ ಹೊರಟು ಬಂದವರಿಗೆ ಸಾಂತ್ವನ, ಭರವಸೆ ಹೇಳದೆ 'ಅಧಿಕಾರದಲ್ಲಿ ನಾನಿದ್ದಾಗಲೇ ಹೋರಾಟ ಮಾಡಬೇಕಿತ್ತಾ' ಎಂದು ಪ್ರಶ್ನಿಸುವ ರೀತಿ ಅವರಿಗೆ ಶೋಭೆ ತರುವಂಥದಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.

'ಗಾಂಧಿ ಹತ್ಯೆ ಇಂದಿಗೂ ನೋವುಂಟು‌ ಮಾಡುತ್ತಿದೆ. ಹಂತಕ ಶಕ್ತಿಗಳು ಅಲ್ಲಲ್ಲಿ ರಾರಾಜಿಸುತ್ತಿವೆ. ಕೋಮುವಾದ, ಹಿಂಸಾತ್ಮಕ ಮನಸ್ಸುಗಳನ್ನು ಖಂಡಿಸಬೇಕು' ಎಂದು ವೊಡೇ ಪಿ.ಕೃಷ್ಣ ಹೇಳಿದರು.

ವೇಮುಗಲ್ ಸೋಮಶೇಖರ್ ವಿರಚಿತ 'ಮಹದೇವ ದೇಸಾಯಿ', ಗಾಂಧೀಜಿ ಅವರ 'ಖಾದಿ ಗ್ರಾಮೋದ್ಯೋಗ', ಹಾಸ್ಯ ಮತ್ತು ಗಾಂಧಿ ಸೇರಿದಂತೆ 8 ಕೃತಿಗಳನ್ನು ಬಿಡುಗಡೆ ಮಾಡಲಾಯಿತು.

ನಡೆದಾಡುವ ಮಹಾತ್ಮ ಗಾಂಧಿ- ವೇಮಗಲ್ ಸೋಮಶೇಖರ್, ಹಿರಿಯ ಕರಡು ತಿದ್ದುಪಡಿಗಾರ ಎಸ್.ಕೆ.ಇಂದ್ರಕುಮಾರ್ ಅವರನ್ನು ಗೌರವಿಸಲಾಯಿತು.

ಶೇಷಾದ್ರಿಪುರ ಕಾಲೇಜು‌ ಸೇರಿದಂತೆ  ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು