ಬೆಂಗಳೂರು: ಆರ್.ಟಿ.ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಚಾಮುಂಡಿ ನಗರದಲ್ಲಿ ಸೋಮವಾರ (ಸೆಪ್ಟೆಂಬರ್ 9) ರಾತ್ರಿ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ನಡೆಯುವ ಕಾರಣ ವಾಹನ ಸಂಚಾರ ಮಾರ್ಗದಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ.

ಸೋಮವಾರ ಸಂಜೆ 6 ರಿಂದ ರಾತ್ರಿ 2 ರವರೆಗೆ ಸಾರ್ವಜನಿಕರ ವಾಹನ ಸಂಚಾರ ನಿಷೇಧಿಸಿ, ಬದಲಿ ಮಾರ್ಗದ ವ್ಯವಸ್ಥೆ ಮಾಡಲಾಗಿದೆ.

ಸುಲ್ತಾನ್ ಪಾಳ್ಯ ಮುಖ್ಯರಸ್ತೆ ಕಡೆಯಿಂದ ಹೊರಡುವ ವಾಹನಗಳು ದಿಣ್ಣೂರು ಜಂಕ್ಷನ್, ದೇವೇಗೌಡ ಮುಖ್ಯರಸ್ತೆ ಮೂಲಕ ಸಾಗಿ ಪಿ.ಆರ್.ಟಿ.ಸಿ ಬಳಿ ಬಲ ತಿರುವು ಪಡೆದು ಜಂಕ್ಷನ್ ವಾಟರ್ ಟ್ಯಾಂಕ್ ಬಳಿ ಎಡ ತಿರುವಿನಲ್ಲಿ ಕಂಟೋನ್ಮೆಂಟ್ ರೈಲು ನಿಲ್ದಾಣ ಕಡೆ ಸಾಗಬಹುದು.

ಸುಲ್ತಾನ್ ಪಾಳ್ಯ ಕಡೆಯಿಂದ ವಿಮಾನ ನಿಲ್ದಾಣಕ್ಕೆ ಸಾಗುವ ವಾಹನಗಳು ದೇವೇಗೌಡ ಮುಖ್ಯರಸ್ತೆ, ವಾಟರ್ ಟ್ಯಾಂಕ್ ಜಂಕ್ಷನ್, ಮಠದಹಳ್ಳಿ ಮುಖ್ಯರಸ್ತೆ, ಗುಂಡೂರಾವ್ ಸರ್ಕಲ್, ತರಳಬಾಳು ರಸ್ತೆ, ಬೆಂಗಳೂರು ಬಳ್ಳಾರಿ ರಸ್ತೆ, ಮೇಕ್ರಿ ಸರ್ಕಲ್, ವಿಮಾನ ನಿಲ್ದಾಣ ಕಡೆಗೆ ಹೋಗಬಹುದು.

ಕಂಟೋನ್ಮೆಂಟ್ ರೈಲು ನಿಲ್ದಾಣ ಕಡೆಯಿಂದ ಆರ್.ಟಿ.ನಗರ, ಸುಲ್ತಾನ್ ಪಾಳ್ಯ ಮೂಲಕ ಕಾವಲ್ ಭೈರಸಂದ್ರ ಕಡೆಗೆ ಸಂಚರಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.