ಬೆಂಗಳೂರು: ನಗರದಲ್ಲಿ 1,500 ಚದರಡಿ ವಿಸ್ತೀರ್ಣದ ನಿವೇಶನಗಳಲ್ಲಿನ ಕಟ್ಟಡಗಳ ಸೆಟ್ಬ್ಯಾಕ್ನಲ್ಲಿ ಭಾರಿ ಕಡಿತ ಮಾಡಿ ನಗರಾಭಿವೃದ್ಧಿ ಇಲಾಖೆ ಕರಡು ಅಧಿಸೂಚನೆ ಹೊರಡಿಸಿದೆ.

ನಿವೇಶನದ ಉದ್ದ–ಅಗಲಕ್ಕೆ ಅನುಗುಣವಾಗಿ ಸೆಟ್ಬ್ಯಾಕ್ ನಿರ್ಧರಿಸುವುದನ್ನು ಕೈಬಿಟ್ಟು, ಒಟ್ಟಾರೆ ಚದರ ಮೀಟರ್ಗೆ ಅನುಗುಣವಾಗಿ ಸೆಟ್ಬ್ಯಾಕ್ ಅನ್ನು ನಿಗದಿಪಡಿಸಲಾಗಿದೆ. ಇದರಂತೆ, 60 ಚದರ ಮೀಟರ್ವರೆಗಿನ (600 ಚದರಡಿ) ನಿವೇಶನದ ಕಟ್ಟಡ ಹಿಂಭಾಗ ಸೆಟ್ಬ್ಯಾಕ್ ಬಿಡುವಂತಿಲ್ಲ. ಮುಂಭಾಗದಲ್ಲಿ 0.75 ಮೀ (ಎರಡೂವರೆ ಅಡಿ), ಎಡ ಅಥವಾ ಬಲ ಭಾಗದಲ್ಲಿ 0.6 ಮೀ (ಎರಡು ಅಡಿ) ಜಾಗ ಬಿಡಬೇಕೆಂದು ನಿಗದಿಯಾಗಿದೆ.

1,500 ಚದರಡಿ ನಿವೇಶನದವರೆಗಿನ ಕಟ್ಟಡಗಳಿಗೆ ಹೊಸ ಸೆಟ್ಬ್ಯಾಕ್ನಲ್ಲಿ ಕಡಿಮೆ ಜಾಗವನ್ನು ನಿಗದಿಪಡಿಸಲಾಗಿದೆ. ಈ ಸೆಟ್ಬ್ಯಾಕ್ ಈಗಾಗಲೇ ನಿರ್ಮಾಣವಾಗಿರುವ ಕಟ್ಟಡಗಳಿಗೂ ಅನ್ವಯಿಸುತ್ತದೆ. ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು 30 ದಿನದ ಅವಕಾಶ ನೀಡಲಾಗಿದೆ.

ಪ್ರಸ್ತುತ ನಿಯಮಗಳ ಪ್ರಕಾರ, 20 x 30 ಅಡಿ ನಿವೇಶನಗಳಲ್ಲಿ ಕಟ್ಟಡದ ಸುತ್ತಲೂ ಒಂದು ಮೀಟರ್ (3 ಅಡಿ 4 ಇಂಚು) ಜಾಗ ಬಿಡಬೇಕು. 30 x 40 ಅಡಿ ನಿವೇಶನಗಳಲ್ಲಿ ಸುತ್ತಲೂ 1.50 ಮೀಟರ್ (5 ಅಡಿ) ಸೆಟ್ಬ್ಯಾಕ್ ಇದೆ.

ಕರಡು ಅಧಿಸೂಚನೆಯಲ್ಲಿ ನಿಗದಿಯಾಗಿರುವ ಸೆಟ್ಬ್ಯಾಕ್ನಂತೆಯೇ ಸ್ಟಿಲ್ಟ್ ಸೇರಿದಂತೆ ನಾಲ್ಕು ಅಂತಸ್ತು ಕಟ್ಟಡಗಳನ್ನು 12 ಮೀಟರ್ ಎತ್ತರ ಮೀರದಂತೆ ನಿರ್ಮಿಸಬಹುದಾಗಿದೆ.

‘ಚಿಕ್ಕ ನಿವೇಶನಗಳಲ್ಲಿ ಸೆಟ್ಬ್ಯಾಕ್ ಉಲ್ಲಂಘನೆಯಾಗುತ್ತಲೇ ಇದೆ. ಬಹುತೇಕ ಬಡವರ್ಗದ ಜನರೇ ಇಂತಹ ನಿವೇಶನಗಳಲ್ಲಿ ಮನೆ ನಿರ್ಮಿಸಿರುತ್ತಾರೆ. ಉಲ್ಲಂಘನೆಗೆ ಕ್ರಮ ಕೈಗೊಳ್ಳಲು ನೋಟಿಸ್ ನೀಡಿದಾಗ ಹಲವು ರೀತಿಯ ಮನವಿ ಮಾಡುತ್ತಾರೆ, ಒತ್ತಡವೂ ಬರುತ್ತದೆ. ನಗರದಲ್ಲಿ ಈಗಾಗಲೇ ನಿರ್ಮಾಣವಾಗಿರುವ ಸಾವಿರಾರು ಮನೆಗಳ ಸುತ್ತ ಸೆಟ್ಬ್ಯಾಕ್ ಇಲ್ಲ. ಹೀಗಾಗಿ, ಚಿಕ್ಕ ನಿವೇಶನಗಳಲ್ಲಿನ ವಸತಿ ಕಟ್ಟಡಗಳಿಗೆ ವಿನಾಯಿತಿ ನೀಡಲಾಗಿದೆ’ ಎಂದು ಜಿಬಿಎ ಯೋಜನೆ ವಿಭಾಗದ ಅಧಿಕಾರಿಗಳು ತಿಳಿಸಿದರು.

ರ್ಯಾಂಪ್ಗೆ ವಿನಾಯಿತಿ: ಸೆಟ್ಬ್ಯಾಕ್ ಹೊರತುಪಡಿಸಿ ರ್ಯಾಂಪ್ ನಿರ್ಮಾಣ ಮಾಡಬೇಕಾದ ನಿಯಮವನ್ನು ಕರಡು ಅಧಿಸೂಚನೆಯಲ್ಲಿ ಕೈಬಿಟ್ಟಿದ್ದು, ಸೆಟ್ಬ್ಯಾಕ್ ಪ್ರದೇಶದಲ್ಲೇ ವಾಹನಗಳ ರ್ಯಾಂಪ್ ನಿರ್ಮಾಣ ಮಾಡಬಹುದು. ಆ ಜಾಗದಿಂದ ಕಾರುಗಳನ್ನು ಕೆಳ ಅಥವಾ ಮೇಲಿನ ಅಂತಸ್ತುಗಳಿಗೆ ಲಿಫ್ಟ್ ಮಾಡುವ ಅವಕಾಶವನ್ನೂ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.