ಶುಕ್ರವಾರ, ಅಕ್ಟೋಬರ್ 30, 2020
26 °C

ಗಿರಿಯಾಸ್ ಹೊಸ ಮಳಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎಲೆಕ್ಟ್ರಾನಿಕ್ಸ್ ಉಪಕರಣಗಳ ವ್ಯಾಪಾರಿಗಳಾದ ‘ಗಿರಿಯಾಸ್’ ತನ್ನ 88ನೆಯ ಮಳಿಗೆಯನ್ನು ಬೆಂಗಳೂರಿನ ಕೆಂಗೇರಿ ಉಪನಗರದ ಹೊಯ್ಸಳ ವೃತ್ತದ ಬಳಿ ಶುಕ್ರವಾರ ಆರಂಭಿಸಿದೆ.

ಹೊಸ ಮಳಿಗೆಯ ಉದ್ಘಾಟನೆಯ ಕಾರಣಕ್ಕಾಗಿ ನಡೆಯುವ ಮೆಗಾ ಮಾರಾಟ ಮೇಳದಲ್ಲಿ ಗ್ರಾಹಕರಿಗೆ ಹಲವು ಕೊಡುಗೆಗಳನ್ನು ನೀಡಲಾಗುತ್ತಿದೆ ಎಂದು ಗಿರಿಯಾಸ್ ಪ್ರಕಟಣೆಯಲ್ಲಿ ತಿಳಿಸಿದೆ. ಖರೀದಿಯ ಜೊತೆ ಉಡುಗೊರೆಗಳು ಇರಲಿವೆ, ಗ್ರಾಹಕರು ತಮಗೆ ಇಷ್ಟವಾದ ವಸ್ತುಗಳಿಗೆ ಆರಂಭಿಕ ಮೊತ್ತವಾಗಿ ₹ 1 ಮಾತ್ರ ಪಾವತಿಸಿ ಇನ್ನುಳಿದ ಮೊತ್ತದ ಪಾವತಿಗೆ ಹಣಕಾಸಿನ ನೆರವು ಪಡೆದುಕೊಳ್ಳಬಹುದು ಎಂದು ಅದು ತಿಳಿಸಿದೆ.

ಈ ಮಾರಾಟ ಮೇಳವು ಭಾನುವಾರದವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ಮಾಡುವ ಪಾವತಿಗಳಿಗೆ ಶುಲ್ಕ ಇಲ್ಲ ಎಂದೂ ಗಿರಿಯಾಸ್ ಹೇಳಿದೆ. ಕೆಂಗೇರಿಯಲ್ಲಿ ಉದ್ಘಾಟನೆ ಆಗಿರುವ ಹೊಸ ಮಳಿಗೆಯ ಸಂಪರ್ಕ ಸಂಖ್ಯೆ: 9900977712.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.