ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಡಾನ್ಸ್‌ ಬಾರ್‌ಗಳಿಗೆ ದಾಳಿ: 66 ಯುವತಿಯರ ರಕ್ಷಣೆ

Last Updated 10 ಫೆಬ್ರುವರಿ 2020, 1:58 IST
ಅಕ್ಷರ ಗಾತ್ರ

ಬೆಂಗಳೂರು: ಅಕ್ರಮವಾಗಿ ಡಾನ್ಸ್‌ ಬಾರ್‌ ನಡೆಸುತ್ತಿದ್ದ ಮೂರು ಬಾರ್‌ ಆ್ಯಂಡ್ ರೆಸ್ಟೋರೆಂಟ್‌ಗಳ ಮೇಲೆ ದಾಳಿ ನಡೆಸಿದ ಕೇಂದ್ರ ಅಪರಾಧ ದಳ (ಸಿಸಿಬಿ) ಪೊಲೀಸರು, 14 ಮಂದಿಯನ್ನು ಬಂಧಿಸಿ ₹ 1.24 ಲಕ್ಷ ವಶಪಡಿಸಿಕೊಂಡಿದ್ದಾರೆ. 66 ಡಾನ್ಸರ್‌ಗಳನ್ನು ರಕ್ಷಿಸಿದ್ದಾರೆ.

ಕಲಾಸಿಪಾಳ್ಯ ಠಾಣೆ ವ್ಯಾಪ್ತಿಯ ಲಾಲ್‌ಬಾಗ್‌ ಪೋರ್ಟ್‌ ರಸ್ತೆಯಲ್ಲಿರುವ ಕೋಸ್ಟರಿಕಾ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗೆ ದಾಳಿ ಮಾಡಿದ ಪೊಲೀಸರು, ಏಳು ಮಂದಿಯನ್ನು ಬಂಧಿಸಿದ್ದಾರೆ. ಅಲ್ಲಿದ್ದ 17 ಗಿರಾಕಿಗಳನ್ನು ವಶಕ್ಕೆ ಪಡೆದಿದ್ದಾರೆ. ಅಶ್ಲೀಲ ನೃತ್ಯ ಮಾಡುವಂತೆ ಪ್ರೇರೇಪಿಸಿ ಕರೆದುಕೊಂಡು ಬಂದಿದ್ದ 26 ಯುವತಿಯರನ್ನು ರಕ್ಷಿಸಲಾಗಿದೆ. ಒಟ್ಟು ₹ 78,230 ವಶಪಡಿಸಿಕೊಳ್ಳಲಾಗಿದೆ.

ಅಶೋಕನಗರ ಠಾಣೆ ವ್ಯಾಪ್ತಿಯ ರೆಸಿಡೆನ್ಸಿ ರಸ್ತೆಯಲ್ಲಿರುವ ತೋಪೇಜ್‌ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗೆ ದಾಳಿ ನಡೆಸಿದ ಪೊಲೀಸರು, ನಾಲ್ವರು ಸಿಬ್ಬಂದಿ ಮತ್ತು 20 ಗಿರಾಕಿಗಳನ್ನು ವಶಕ್ಕೆ ಪಡೆದಿದ್ದಾರೆ. ಡ್ಯಾನ್ಸ್‌ ಮಾಡಲು ಬಂದಿದ್ದ 40 ಯುವತಿಯರನ್ನು ರಕ್ಷಿಸಲಾಗಿದ್ದು, ₹ 23,550 ಜಪ್ತಿ ಮಾಡಲಾಗಿದೆ.

ಕಾಟನ್‌ಪೇಟೆ ಠಾಣಾ ವ್ಯಾಪ್ತಿಯ ಸಿಟಿ ಸೆಂಟರ್‌ ಹೋಟೆಲ್‌ ಕಟ್ಟಡದ ಸೆಲ್ಲಾರ್‌ ‘ಬಿ’ ಹಾಲ್‌ನಲ್ಲಿರುವ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗೆ ದಾಳಿ ಮಾಡಿದ ಪೊಲಿಸರು, ಮೂವರು ಸಿಬ್ಬಂದಿಯನ್ನು ಬಂಧಿಸಿದ್ದಾರೆ. ಡಾನ್ಸ್‌ ಬಾರ್‌ಗೆ ಬರುವ ಗಿರಾಕಿಗಳ ಎದುರು ನೃತ್ಯ ಮಾಡಲು ಹೋಟೆಲ್‌ ಸಿಬ್ಬಂದಿ ಇಟ್ಟುಕೊಂಡಿದ್ದ ಬೇರೆ ಬೇರೆ ರಾಜ್ಯಗಳ ಎಂಟು ಯುವತಿಯರನ್ನು ರಕ್ಷಿಸಿದ್ದಾರೆ. ಅಲ್ಲದೆ, ಸಿಬ್ಬಂದಿ ಬಳಿ ಇದ್ದ ₹ 22,600 ವಶ
ಪಡಿಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT