ಬೆಂಗಳೂರು: ‘ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಆಶ್ರಯದಲ್ಲಿ ನವೆಂಬರ್ 13ರಿಂದ 16ರವರೆಗೆ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ ‘ಸಮೃದ್ಧ ಕೃಷಿ ವಿಕಸಿತ ಭಾರತ– ನೆಲ, ಜಲ, ಬೆಳೆ’ ಎಂಬ ಘೋಷವಾಕ್ಯದಡಿ ಕೃಷಿ ಮೇಳ ನಡೆಯಲಿದೆ’ ಎಂದು ವಿಶ್ವವಿದ್ಯಾಲಯದ ಕುಲಪತಿ ಎಸ್.ವಿ. ಸುರೇಶ ತಿಳಿಸಿದ್ದಾರೆ.

‘ಅತ್ಯಮೂಲ್ಯ ನೈಸರ್ಗಿಕ ಸಂಪನ್ಮೂಲಗಳಾದ ನೆಲ, ಜಲ ಹಾಗೂ ಜೀವ ವೈವಿಧ್ಯದ ಮೇಲೆ ನಮ್ಮ ದೇಶ ಅವಲಂಬಿತವಾಗಿದೆ. ಇವುಗಳನ್ನು ವೈಜ್ಞಾನಿಕವಾಗಿ ಜವಾಬ್ದಾರಿಯುತವಾಗಿ ಬಳಸಿ, ಸಂರಕ್ಷಿಸುವ ಮೂಲಕ ಸುಸ್ಥಿರ ಕೃಷಿ ಹಾಗೂ ಕೃಷಿಕರ ಆದಾಯವೃದ್ಧಿ ಮಾಡುವುದು ಈ ಮೇಳದ ಉದ್ದೇಶವಾಗಿದೆ. ವಿಕಸಿತ ಭಾರತದ ಪರಿಕಲ್ಪನೆಗೆ ಕೃಷಿ ಕ್ಷೇತ್ರದ ಕೊಡುಗೆಯನ್ನು ಪ್ರತಿಪಾದಿಸುವ ವಿಶೇಷ ವೇದಿಕೆಯನ್ನು ಈ ಮೇಳ ಕಲ್ಪಿಸಲಿದೆ’ ಎಂದು ಅವರು ಹೇಳಿದ್ದಾರೆ.

‘ಭವಿಷ್ಯದ ಸಮೃದ್ಧ ಕೃಷಿಯಿಂದ ಮಾತ್ರ ವಿಕಸಿತ ಭಾರತ ನಿರ್ಮಾಣ ಸಾಧ್ಯ. ಇದಕ್ಕೆ ಪೂರಕವಾಗಿ ಅಗತ್ಯ ತಂತ್ರಜ್ಞಾನಗಳ ಪ್ರದರ್ಶನ ಹಾಗೂ ಮಾಹಿತಿ ಪೂರೈಕೆಗೆ ಕೃಷಿಮೇಳ ವೇದಿಕೆ ಒದಗಿಸಲಿದೆ. ಇದರ ಜೊತೆಗೆ ಕೃಷಿಕರ ಸಾಂಪ್ರದಾಯಿಕ ಮೂಲಗಳ ಹೊರತಾಗಿ ಹೊಸ ಆದಾಯ ಗಳಿಕೆಯ ಹಾದಿಗಳನ್ನು ಸೃಷ್ಟಿಸಲಾಗುತ್ತದೆ. ಕೃಷಿ ಬಗ್ಗೆ ಸಾರ್ವಜನಿಕರಲ್ಲಿ ಆಸಕ್ತಿ ಮೂಡಿಸಲು ಕೃಷಿ ಪ್ರವಾಸೋದ್ಯಮವನ್ನು ಒಂದು ಉದ್ದಿಮೆಯಾಗಿ ಪರಿಚಯಿಸುವ ಪ್ರಯತ್ನಕ್ಕೆ ಈ ಮೇಳ ಸಾಕ್ಷಿಯಾಗಲಿದೆ. ಮೇಳದಲ್ಲಿ ಬೃಹತ್ ವಸ್ತು ಪ್ರದರ್ಶನ, ಬೆಳೆ ಪ್ರಾತ್ಯಕ್ಷಿಕೆಗಳು, ಸಂವಾದ, ಪ್ರಶಸ್ತಿ ಪ್ರದಾನ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.