ಶನಿವಾರ, ಮೇ 21, 2022
19 °C

ಕೃಷಿ ಮೇಳದಲ್ಲಿ ಹಳ್ಳಿಕಾರ್ ತಳಿಯ ಹೋರಿಗಳದ್ದೇ ಕಾರುಬಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೃಷಿ ಮೇಳದಲ್ಲಿ ಪಶು ಸಂಗೋಪನಾ ವಿಭಾಗದ ಮಳಿಗೆಗಳಲ್ಲಿ ಈ ಬಾರಿ ಹಳ್ಳಿಕಾರ್ ತಳಿಯ ಹೋರಿಗಳದ್ದೇ ಕಾರುಬಾರು.

ಹಳ್ಳಿಕಾರ್ ತಳಿಯ ಹೋರಿಯೊಂದನ್ನು ಮಂಡ್ಯ ಜಿಲ್ಲೆಯ ಬನ್ನೂರಿನ ಕೃಷ್ಣೇಗೌಡ ತಂದಿದ್ದರು. ರೈತರು ಮುಗಿಬಿದ್ದು ಈ ಹೋರಿಯನ್ನು ವೀಕ್ಷಿಸಿದರು. ಕೆಲವರು ಹೋರಿಯೊಂದಿಗೆ ನಿಂತು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

‘ರಾಮನಗರದಿಂದ ಈ ಹೋರಿಯನ್ನು ಖರೀದಿಸಿ ತಂದಿದ್ದೇನೆ. ಇದನ್ನು ಸಂತಾನೋತ್ಪತ್ತಿಗೆ ಮಾತ್ರ ಬಳಸಲಾಗುತ್ತಿದೆ. ‌ಎರಡು ವರ್ಷ ಎರಡು ತಿಂಗಳು ವಯಸ್ಸಿನ ಈ ಹೋರಿ ₹1.75 ಲಕ್ಷ ಮೌಲ್ಯ ಹೊಂದಿದೆ. ಕೆಲವರು ಹೋರಿ ಮೌಲ್ಯದ ಬಗ್ಗೆ ಸುಳ್ಳು ಹೇಳಿ ಪ್ರಚಾರ ತೆಗೆದುಕೊಳ್ಳುತ್ತಾರೆ. ಅದರ ಅಗತ್ಯ ಇರುವುದಿಲ್ಲ’ ಎಂದು ಕೃಷ್ಣೇಗೌಡ ಹೇಳಿದರು.

ಹೊಸಕೋಟೆ ತಾಲ್ಲೂಕಿನ ಸಮೇತನಹಳ್ಳಿ ಗ್ರಾಮದ ಶಾಂತಕುಮಾರ್ ಎಂಬುವರು ₹1.50 ಲಕ್ಷ ಮೌಲ್ಯದ ಜೋಡೆತ್ತುಗಳನ್ನು ಮೇಳದಲ್ಲಿ ಕಟ್ಟಿದ್ದರು. ಮತ್ತೊಂದೆಡೆ ಕನಕಪುರದ ಹಾರವಳ್ಳಿಯ ಶಾಮಣ್ಣ ಅವರು 4 ಲಕ್ಷ ಮೌಲ್ಯ ಹಳ್ಳಿಕಾರ್ ತಳಿಯ ಜೋಡೆತ್ತುಗಳನ್ನು ಕಟ್ಟಿದ್ದರು.‌

ಇವುಗಳ ಜೊತೆಗೆ ಪ್ರತಿ ವರ್ಷದಂತೆ ಕಡನಕಾತ್ ಕೋಳಿಗಳು ಮೇಳದಲ್ಲಿ ಜನರನ್ನು ಆಕರ್ಷಿಸಿದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು