ಬುಧವಾರ, ಜನವರಿ 20, 2021
21 °C

ಕುಲವನಹಳ್ಳಿ: ಅಕ್ಕನ ಮಣಿಸಿದ ತಂಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾಬಸ್ ಪೇಟೆ: ರಾಜಕೀಯದಲ್ಲಿ ಅಣ್ಣ–ತಮ್ಮಂದಿರು, ಅಕ್ಕ–ತಂಗಿಯರು ಹಾಗೂ ಸಂಬಂಧಿಕರ ಮಧ್ಯೆ ನಡೆಯುವ ಹಣಾಹಣಿ ಸಹಜವಾಗಿಯೇ ಕುತೂಹಲ ಕೆರಳಿಸುತ್ತದೆ. ನೆಲಮಂಗಲ ತಾಲ್ಲೂಕಿನ ಕುಲವನಹಳ್ಳಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಕ್ಕನನ್ನು ತಂಗಿ ಸೋಲಿಸುವ ಮೂಲಕ ಜಯದ ನಗೆ ಬೀರಿದ್ದಾರೆ.

ಕುಲವನಹಳ್ಳಿ ವಾರ್ಡ್‌ನ ಮಹಿಳಾ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಹೋದರಿಯರಾದ ಸುನಂದಮ್ಮ ಹಾಗೂ ಚಂದ್ರಮ್ಮ ಪ್ರತಿಸ್ಪರ್ಧಿಗಳಾಗಿದ್ದರು. ಇವರಿಬ್ಬರ ನಡುವಿನ ಸ್ಪರ್ಧೆ ಗ್ರಾಮದಲ್ಲಿ ಚರ್ಚೆಯ ಕೇಂದ್ರಬಿಂದುವಾಗಿತ್ತು.

ಅಕ್ಕನೊಂದಿಗೆ ಸ್ಪರ್ಧೆಯಲ್ಲಿದ್ದ ಮತ್ತೋರ್ವ ಮಹಿಳೆ ಶೋಭಾ ಎಂಬುವರನ್ನೂ ಹಿಂದಿಕ್ಕಿದ ಸುನಂದಮ್ಮ, 292 ಮತಗಳನ್ನು ಪಡೆಯುವ ಮೂಲಕ ಮೂರು ಮತಗಳ ಅಂತರದ ಜಯ ಸಾಧಿಸಿದ್ದಾರೆ. ಇವರಿಗೆ 289 ಮತಗಳ ಮೂಲಕ ಶೋಭಾ ಪೈಪೋಟಿ ನೀಡಿದ್ದರು.

‘10 ವಷಗಳ ಹಿಂದೆ ಇದೇ ವಾರ್ಡ್‌ನಿಂದ ಸ್ಪರ್ಧಿಸಿ, ಸೋಲು ಕಂಡಿದ್ದೆ. ಈ ಬಾರಿ ಮತ್ತೆ ಸ್ಪರ್ಧಿಸಲು ಅವಕಾಶ ಸಿಕ್ಕಿತು. ವಾರ್ಡ್‌ನ ಜನರೊಂದಿಗಿನ ಒಡನಾಟ ಹಾಗೂ ಬೆಂಬಲದಿಂದ ಜಯ ಸಾಧ್ಯವಾಯಿತು. ವಾರ್ಡ್‌ಗೆ ಬೇಕಾದ ಸೌಲಭ್ಯ ಕಲ್ಪಿಸುವ ಜೊತೆಗೆ ಪಂಚಾಯಿತಿಯಿಂದ ಜನತೆಗೆ ಸಿಗುವ ಎಲ್ಲ ಸವಲತ್ತುಗಳನ್ನು ಒದಗಿಸುತ್ತೇನೆ’ ಎನ್ನುತ್ತಾರೆ ಸುನಂದಮ್ಮ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು