ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಜಾತ್ರೆಯ ಕಡಲೆಕಾಯಿ ಪರಿಷೆ

ಬಸವನಗುಡಿಯಲ್ಲಿ ಕಡಲೆಕಾಯಿ, ಆಟಿಕೆ, ತಿನಿಸು, ಆಟಗಳ ಮೋಜು
Last Updated 20 ನವೆಂಬರ್ 2022, 15:19 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಸುಂಕೇನಹಳ್ಳಿಯಲ್ಲಿನಾಲ್ಕಾರು ಬಗೆಯ ಕಡಲೆಕಾಯಿಯ ಆಕರ್ಷಣೆಯಜತೆಗೆವಿವಿಧಭಕ್ಷ್ಯಗಳು, ಆಟಿಕೆ, ಜಗಮಗಿಸುವ ಬೆಳಕಿನಲ್ಲಿ ಜಾಯಿಂಟ್‌ ವೀಲ್‌,ಟೊರಾಟೋರಾಆಟದ ಮೋಜು...ಚುಮುಚುಮುಚಳಿಯಲ್ಲೂಕಾರ್ತಿಕ ಮಾಸದ ಕೊನೆವಾರ ಬಸವನಗುಡಿಯಲ್ಲಿ ಜನಜಾತ್ರೆ...

ನಗರದ ಐತಿಹಾಸಿಕ ಕಡಲೆಕಾಯಿಪರಿಷೆಯಸಂಕ್ಷಿಪ್ತ ಚಿತ್ರಣಇದು.ಕಾರ್ತಿಕಮಾಸದ ಕೊನೆ ಸೋಮವಾರಪರಿಷೆನಡೆಯುತ್ತದೆ. ಆದರೆ, ಅದಕ್ಕೂ ಮೂರು ದಿನ ಮೊದಲು ಹಾಗೂ ನಂತರ ಮುಂದಿನ ಮೂರು ದಿನ ಇಲ್ಲಿ ಜಾತ್ರೆಸಂಭ್ರಮವಿರುತ್ತದೆ.

ಕಳೆದ ಬಾರಿಪರಿಷೆಸಾರ್ವಜನಿಕವಾಗಿಆಚರಣೆಯಾಗಿತ್ತಾದರೂ ಕೋವಿಡ್‌ ಮೂರನೇ ಅಲೆಯ ಭೀತಿ ಹಾಗೂ ಮಾಸ್ಕ್‌ ನಡುವೆ ಕಳೆಗುಂದಿತ್ತು. ಈ ಬಾರಿ ಜನರು ಯಾವುದೇ ಆತಂಕವಿಲ್ಲದೆ ಭಾಗವಹಿಸಿದ್ದರು.

ಬಸವನಗುಡಿಮುಖ್ಯರಸ್ತೆಯಲ್ಲಿ ಗುರುವಾರ ಸಂಜೆಯಿಂದಲೇ ಕಡಲೆಕಾಯಿ ಹಾಗೂ ಆಟಿಕೆ, ತಿನಿಸುಗಳ ಮಳಿಗೆಆರಂಭವಾಗಿದ್ದವು. ವಾರಾಂತ್ಯದಲ್ಲಿ ಮಳಿಗೆ ಹಾಗೂ ಜನರ ಆಗಮನ ಹೆಚ್ಚಾಯಿತು. ಕಡಲೆಕಾಯಿ ರಾಶಿಗಳಿಗಿಂತ ಇತರೆಮಳಿಗೆಗಳಅಬ್ಬರವೇ ಈ ಬಾರಿಅತಿ ಹೆಚ್ಚಾಗಿತ್ತು.

ದೊಡ್ಡಬಸವಣ್ಣ, ದೊಡ್ಡ ಗಣತಿ, ಕಾರಂಜಿ ಆಂಜನೇಯನ ದರ್ಶನ ಪಡೆದ ಜನರು ಜಾತ್ರೆಯ ಸೊಬಗನ್ನು ಅನುಭವಿಸಿದರು. ಬೇಲ್‌, ಬಜ್ಜಿ,ಮಸಾಲಹಪ್ಪಳ, ಆಲೂ ಟ್ವಿಸ್ಟರ್‌... ಪ್ರಮುಖ ತಿನಿಸುಗಳಾಗಿಮನಸೆಳೆದವು. ಮಕ್ಕಳುಸೇರಿದಂತೆಎಲ್ಲವಯೋಮಾನದವರನ್ನುಹೆಚ್ಚಾಗಿಸೆಳೆದದ್ದುಟೊರಾಟೊರಾ, ಜಾಯಿಂಟ್‌ ವೀಲ್‌, ತೇಲುವ ಹಡಗು ಇತರೆ ಆಟಗಳು. ರಾಕ್ಷಸನ ಬೆಳಕಿನ ಕೊಂಬುಗಳು, ಏಂಜಲ್‌ ಕಿರೀಟ, ವಿವಿಧ ರೀತಿಯಪೀಪಿಗಳು, ಬಲೂನ್‌ಗಳು ಮಕ್ಕಳನ್ನು ಹೆಚ್ಚುಆಕರ್ಷಿಸಿದವು. ಬೊಂಬೆಮಿಠಾಯಿಯಿಂದಕೈಗೆವಾಚು, ಬೆರಳಿಗೆಉಂಗುರುವನ್ನುಮಕ್ಕಳಿಗೆ ತೊಡಿಸಿ ಪೋಷಕರುಸಂಭ್ರಮಿಸಿದರು. ಮಕ್ಕಳಿಗೆಎಂದೂ ಕಾಣದಸಂಭ್ರಮ.

‘ಕಳೆದ ಬಾರಿಕೊರೊನಾಆತಂಕದಿಂದಪರಿಷೆಗೆಬಂದಿರಲಿಲ್ಲ. ಈ ಬಾರಿಕುಟುಂಬದೊಂದಿಗೆ ಬಂದಿದ್ದೇವೆ. ಮಕ್ಕಳು ಆನಂದಿಸುತ್ತಿದ್ದಾರೆ. ಬೃಹತ್‌ ಮಾಲ್‌ಗಳ ಮಳಿಗೆಗಳನ್ನು ಕಂಡಿರುವ ಮಕ್ಕಳು ಇಂತಹ ಜಾತ್ರೆಯಸೊಬಗನ್ನೂಅರಿಯುವ ತಾಣ ಇದಾಗಿದೆ’ ಎಂದುಗಿರಿನಗರಜಗನ್ನಾಥ್‌ ಹೇಳಿದರು.

‘ಇದು ಕಡಲೆಕಾಯಿಪರಿಷೆ. ಈ ಮೊದಲು ಕಡಲೆಕಾಯಿಗಳ ರಾಶಿಕಾಣಸಿಗುತ್ತಿತ್ತು. ಇತ್ತೀಚೆಗೆ ಬದಲಾಗಿದೆ. ಇದೀಗಜಾತ್ರೆಯಂತಾಗಿದೆ. ಜಾತ್ರೆ ಎಂದರೆ ಎಲ್ಲವೂ ಸಿಗುವ ತಾಣ.ಅಡುಗೆಮನೆಯಿಂದಹಿಡಿದು ಮನೆಯ ಎಲ್ಲ ಉಪಕರಣ,ಸೌಂದರ್ಯ ಸಾಧನಗಳುಸೇರಿದಂತೆಉಡುಪುಗಳೂ ಇಲ್ಲಿ ಸಿಗುತ್ತಿವೆ.ಬೀದಿಬದಿಯತಿನಿಸುಗಳೂಮನಸೆಳೆಯುತ್ತಿವೆ. ಮಾಲ್‌ ಸಂಸ್ಕೃತಿ ನಡುವೆ ಮಕ್ಕಳಿಗೆ ನಮ್ಮ ಆಚರಣೆಯನ್ನು ಒಂದಷ್ಟು ತಿಳಿಸುವಪರಿಷೆಇದು’ ಎಂದು ರಾಜರಾಜೇಶ್ವರಿನಗರದ ಶ್ರೀನಿವಾಸ್‌ ಅಭಿಪ್ರಾಯಪಟ್ಟರು.

ಪ್ಲಾಸ್ಟಿಕ್‌ ಮುಕ್ತ: ಪ್ಲಾಸ್ಟಿಕ್‌ ಏಕೆ, ಬಟ್ಟೆ ಚೀಲ ಓಕೆ... ಉಗೇ ಉಗೇ ಬಟ್ಟೆ ಚೀಲ, ಬೇಡ ಬೇಡ ಪ್ಲಾಸ್ಟಿಕ್‌ ಚೀಲ... ಹೀಗೆಂದು ಬಹುತೇಕ ವ್ಯಾಪಾರಿಗಳು ಫಲಕ ಹಾಕಿಕೊಂಡು, ಪೇಪರ್‌ ಅಥವಾ ಬಟ್ಟೆ ಚೀಲಗಳಲ್ಲಿ ಕಡಲೆಕಾಯಿ ನೀಡುತ್ತಿದ್ದರು. ಪ್ಲಾಸ್ಟಿಕ್‌ ಬಳಕೆ ನಿರ್ಬಂಧಿಸಿ ಬಿಬಿಎಂಪಿ ಆದೇಶಿಸಿದ್ದ ಹಿನ್ನೆಲೆಯಲ್ಲಿ ಪೇಪರ್ ಹಾಗೂ ಬಟ್ಟೆಯ ಚೀಲಗಳ ಬಳಕೆಯೇ ಹೆಚ್ಚಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT