ಬೆಂಗಳೂರು: ಮೂರು ವರ್ಷಗಳ ಬಳಿಕ ಮತ್ತೆ ಸ್ಥಿರಾಸ್ತಿಗಳ ಮಾರ್ಗಸೂಚಿ ದರಗಳನ್ನು ಪರಿಷ್ಕರಿಸಲಾಗಿದೆ. ಪರಿಷ್ಕೃತ ದರಗಳು ಡಿಸೆಂಬರ್ ಕೊನೆಯ ವಾರದಿಂದ ಜಾರಿಗೆ ಬರಲಿವೆ.

ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕರಡು ದರ ಪಟ್ಟಿಗೆ ಸಂಬಂಧಿಸಿದ ಆಕ್ಷೇಪಣೆಗಳನ್ನು ವಿಲೇವಾರಿ ಮಾಡಿದ ಬಳಿಕ ಪರಿಷ್ಕೃತ ದರ ಪ್ರಕಟಿಸಲಾಗಿದೆ.

ಜಯನಗರದ 11ನೇ ಮುಖ್ಯ ರಸ್ತೆ 4ನೇ ಹಂತದಲ್ಲಿನ ವಾಣಿಜ್ಯ ನಿವೇಶನದ ದರವನ್ನು ಪ್ರತಿ ಚದರ ಮೀಟರ್ಗೆ ₹4,57,400ಕ್ಕೆ ನಿಗದಿ ಮಾಡಲಾಗಿದೆ. ಎರಡನೇ ಹೆಚ್ಚು ಮೌಲ್ಯ ಹೊಂದಿದ ನಿವೇಶನಗಾಂಧಿನಗರ ವ್ಯಾಪ್ತಿಯ ಒಟಿಸಿ ರಸ್ತೆಯಲ್ಲಿದೆ. ಇದರ ಮೌಲ್ಯಪ್ರತಿ ಚದರ ಮೀಟರ್ಗೆ ₹3,44,500 ಆಗಿದೆ.

ವಸತಿ ವಿಭಾಗದಲ್ಲಿ ಕಡಿಮೆ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಜಯನಗರ ವಲಯದಲ್ಲಿದೆ. ಇದರ ಮೌಲ್ಯಇವಿಡಬ್ಲ್ಯೂ ನಿವೇಶನಕ್ಕೆ ₹900. ಎರಡನೆಯ ಕಡಿಮೆ ಮೌಲ್ಯ ₹1,800 ಆಗಿದೆ. ಇದುಬಸವನಗುಡಿ ವಲಯ ವ್ಯಾಪ್ತಿಯ ಚಿಕ್ಕನಹಳ್ಳಿಯಲ್ಲಿದೆ.

‘ಪರಿಷ್ಕೃತ ಮಾರ್ಗಸೂಚಿ ದರಗಳ ಅಂತಿಮ ವರದಿ ಸಿದ್ಧವಾಗಿದ್ದು, ದತ್ತಾಂಶ ನಮೂದಿಸುವ ಕಾರ್ಯ ಸಹ ಮುಗಿಯಲು ಬಂದಿದೆ. ಹೊಸ ದರಗಳನ್ನು ಡಿಸೆಂಬರ್ ಕೊನೆಯ ವಾರ ಪ್ರಕಟಿಸಲಾಗುವುದು’ ಎಂದು ಹೇಳಿದರು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಆಯುಕ್ತ ಕೆ.ವಿ.ತ್ರಿಲೋಕಚಂದ್ರ.

‘ಕೆಲವೊಂದು ಪ್ರದೇಶಗಳಲ್ಲಿ ದರವನ್ನುಪರಿಷ್ಕರಣೆ ಮಾಡಲಾಗಿದೆ. ಇನ್ನು ಕೆಲವು ಕಡೆ ಸ್ಥಿರವಾಗಿದೆ. ಬೇಡಿಕೆ ಮತ್ತು ಅಭಿವೃದ್ಧಿ ಬೆಳವಣಿಗೆಯ ಆಧಾರದ ಮೇಲೆ ಪರಿಷ್ಕರಣೆ ಮಾಡಲಾಗಿದೆ’ ಎಂದು ಹೇಳಿದರು.

‘2016ರ ಮಾರ್ಚ್ ತಿಂಗಳಲ್ಲಿ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಿಸಲಾಗಿತ್ತು. ಎರಡು ವರ್ಷಗಳಿಂದ ಹೆಚ್ಚಳ ಮಾಡಿರಲಿಲ್ಲ. ಈ ಸಲ ಬಜೆಟ್ನಲ್ಲಿ ನೀಡಿರುವ ಗುರಿಗೂ ಇಲಾಖೆಯ ರಾಜಸ್ವ ಸಂಗ್ರಹಕ್ಕೂ ಶೇ 15ರಷ್ಟು ವ್ಯತ್ಯಾಸ ಇದೆ. ಹೀಗಾಗಿ, ದರ ಪರಿಷ್ಕರಣೆ ಅನಿವಾರ್ಯವಾಯಿತು’ ಎಂದು ತಿಳಿಸಿದರು.

‘ಕೆಲವು ಕಡೆಗಳಲ್ಲಿ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಕ್ಕೆ ಸಮನಾಗಿ ಮಾರ್ಗಸೂಚಿ ದರ ಪರಿಷ್ಕರಣೆ ಆಗಿಲ್ಲ. ಮಾರ್ಗಸೂಚಿ ದರ ಮತ್ತು ಮಾರುಕಟ್ಟೆ ದರದ ನಡುವೆ ಭಾರಿ ಅಂತರ ಇರುವುದು ನೋಂದಣಿ ವಹಿವಾಟು ಪರಿಶೀಲನೆ ಸಂದರ್ಭದಲ್ಲಿ ಗಮನಕ್ಕೆ ಬಂದಿದೆ. ಇಂತಹ ಲೋಪಗಳನ್ನು ಸರಿಪಡಿಸುವುದಕ್ಕೆ ಈ ಬಾರಿಯ ಪರಿಷ್ಕರಣೆಯಲ್ಲಿ ಆದ್ಯತೆ ನೀಡಲಾಗಿದೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.