ಶುಕ್ರವಾರ, ಜೂನ್ 18, 2021
21 °C
ಬಿಬಿಎಂಪಿ ವ್ಯಾಪ್ತಿಯಲ್ಲಿ 22 ಪ್ರಕರಣ ಪತ್ತೆ

ಎಚ್‌1ಎನ್‌1 ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವರ್ಷದ ಆರಂಭದಲ್ಲೇ ರಾಜ್ಯದಲ್ಲಿ 40 ಎಚ್‌1ಎನ್‌1 ಪ್ರಕರಣವರದಿಯಾಗಿದ್ದು, ಅದರಲ್ಲಿ 24 ಪ್ರಕರಣ ನಗರದಲ್ಲಿಯೇ  ಪತ್ತೆಯಾಗಿವೆ.

ಕಳೆದ ವರ್ಷ ಸೋಂಕಿನಿಂದ 2 ಸಾವಿರಕ್ಕೂ ಅಧಿಕ ಮಂದಿ ಬಳಲಿದ್ದು, ಐದು ವರ್ಷಗಳಲ್ಲಿಯೇ ಅತೀ ಹೆಚ್ಚು ಸಾವು ವರದಿಯಾಗಿತ್ತು. ಚಿಕಿತ್ಸೆ ಫಲಿಸದೆ 96 ಮಂದಿ ಮೃತಪಟ್ಟಿದ್ದರು.  2010ರಲ್ಲಿ 120 ಮಂದಿ ಈ ಜ್ವರದಿಂದಾಗಿ ಮೃತಪಟ್ಟಿದ್ದರು. ಕಳೆದ ವರ್ಷ ಪ್ರಾರಂಭದಲ್ಲಿ ಅಧಿಕ ಮಂದಿಯನ್ನು ಈ ರೋಗ ಕಾಡಿತ್ತಾದರೂ ವರ್ಷಾಂತ್ಯದ ವೇಳೆಗೆ ನಿಯಂತ್ರಣಕ್ಕೆ ಬಂದಿತ್ತು. ಈಗ ಪುನಃ ಸೋಂಕು ಹರಡಲು ಆರಂಭಿಸಿರುವುದು ಆತಂಕಕ್ಕೆ ಕಾರಣವಾಗಿದೆ. 

ಬಿಬಿಎಂಪಿ ವ್ಯಾಪ್ತಿಯ ಆಸ್ಪತ್ರೆಯಲ್ಲಿಯೇ 22 ಪ್ರಕರಣಗಳು ಬೆಳಕಿಗೆ ಬಂದಿವೆ. ಉಡುಪಿ–7, ದಕ್ಷಿಣ ಕನ್ನಡ ಮತ್ತು ದಾವಣಗೆರೆಯಲ್ಲಿ ತಲಾ 3, ಬೆಂಗಳೂರು ಗ್ರಾಮಾಂತರ– 2 ಹಾಗೂ ಶಿವಮೊಗ್ಗದಲ್ಲಿ 1 ಪ್ರಕರಣಗಳು ವರದಿಯಾಗಿವೆ.  ಜ್ವರ, ಶೀತ, ಗಂಟಲನೋವು, ತಲೆನೋವು, ಮೈ–ಕೈ ನೋವು, ವಾಂತಿ ಮತ್ತು ಭೇದಿಯು ಎಚ್‌1ಎನ್‌1 ಜ್ವರದ ಪ್ರಮುಖ ಲಕ್ಷಣಗಳಾಗಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು