ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಎಂಟಿಸಿ ಸಿಬ್ಬಂದಿಗೆ ಆರೋಗ್ಯ ತಪಾಸಣೆ

Published 6 ಜುಲೈ 2024, 16:11 IST
Last Updated 6 ಜುಲೈ 2024, 16:11 IST
ಅಕ್ಷರ ಗಾತ್ರ

ಬೆಂಗಳೂರು: ಬಿಎಂಟಿಸಿಯ ಸಿಬ್ಬಂದಿಗೆ ಪ್ರತಿ ಶನಿವಾರ ಮತ್ತು ಭಾನುವಾರ ಶ್ವಾಸಕೋಶ ಮತ್ತು ಉಸಿರಾಟದ ಸಮಸ್ಯೆಗಳ ಬಗ್ಗೆ ತಪಾಸಣೆ ನಡೆಸುವ ಯೋಜನೆ ಶನಿವಾರ ಆರಂಭವಾಯಿತು.

ಜಯನಗರದ 5ನೇ ಬ್ಲಾಕ್‌ನಲ್ಲಿರುವ ‘ವಾಯು ಚೆಸ್ಟ್ ಆ್ಯಂಡ್‌ ಸ್ಲೀಪ್ ಸೆಂಟರ್‌’ನಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ದಿನಕ್ಕೆ 50 ಸಿಬ್ಬಂದಿಗೆ ಅಧಿಕ ರಕ್ತದೊತ್ತಡ, ಆಮ್ಲಜನಕದ ಪ್ರಮಾಣ, ರಕ್ತದಲ್ಲಿ ಸಕ್ಕರೆಯ ಅಂಶ, ಶ್ವಾಸಕೋಶದ ಶಕ್ತಿ ಚೈತನ್ಯ, ಇಎನ್‌ಟಿ (ಕಿವಿ, ಮೂಗು, ಗಂಟಲು) ಪರೀಕ್ಷೆ, ಶ್ವಾಸಕೋಶದ ಎಕ್ಸ್‌–ರೇ ಸೇರಿದಂತೆ ಉಸಿರಾಟ ಹಾಗೂ ಶ್ವಾಸಕೋಶ ಸಂಬಂಧಿತ ತಪಾಸಣೆ ಮತ್ತು ತಜ್ಞರೊಡನೆ ಸಮಾಲೋಚನೆ ನಡೆಯಲಿದೆ.

ಸೆಂಟರ್‌ ನಿರ್ದೇಶಕ ಡಾ. ರವೀಂದ್ರ ಎಂ. ಮೆಹ್ತಾ ನೇತೃತ್ವದಲ್ಲಿ ತಪಾಸಣೆ ಮತ್ತು ಸಮಾಲೋಚನೆ ನಡೆಯಲಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ರಾಮಚಂದ್ರನ್‌ ಆರ್‌. ತಿಳಿಸಿದ್ದಾರೆ.

ಬಿಎಂಟಿಸಿಯ 40 ವರ್ಷ ದಾಟಿದ 11,200 ಸಿಬ್ಬಂದಿಗೆ ಈಗಾಗಲೇ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ  ಹೃದಯ ಸಂಬಂಧಿತ ತಪಾಸಣೆಯನ್ನು ಮಾಡಲಾಗಿದೆ ಎಂದು ಸಾರ್ವಜನಿಕ ಸಂಪರ್ಕ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT