ಬುಧವಾರ, ನವೆಂಬರ್ 13, 2019
23 °C
ಆಸ್ಪತ್ರೆ, ಔಷಧ ಮಳಿಗೆಗಳಿಂದ ಮಾಹಿತಿ ಸಂಗ್ರಹ

ಶೇ 66 ರಷ್ಟು ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಇನ್ಸುಲಿನ್

Published:
Updated:
Prajavani

ಬೆಂಗಳೂರು: ನಗರದ ಶೇ 66 ರಷ್ಟು ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಇನ್ಸುಲಿನ್ ಔಷಧಿ ಲಭ್ಯವಿದೆ ಎನ್ನುವುದು ಸಂಶೋಧನೆಯಿಂದ ಬೆಳಕಿಗೆ ಬಂದಿದೆ.

ವಿಶ್ವ ಆರೋಗ್ಯ ಸಂಸ್ಥೆಯು ಶೇ 80 ರಷ್ಟು ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ಸುಲಿನ್ ಔಷಧಿ ಲಭ್ಯವಿರಬೇಕೆಂದು ಸೂಚಿಸಿದೆ. ಈ ಬಗ್ಗೆ ಕೇರಳದ ಕೋಯಿಕ್ಕೋಡ್‍ನ ನ್ಯಾಷನಲ್ ಫಾರ್ಮಸಿ ಕಾಲೇಜು ಹಾಗೂ ಅಮೆರಿಕದ ಬಾಸ್ಟನ್ ಯುನಿವರ್ಸಿಸಿ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ ಸಂಶೋಧಕರು ನಗರದಲ್ಲಿ ನಡೆಸಿದ ಸಂಶೋಧನೆಯಲ್ಲಿ ಅಗತ್ಯ ಪ್ರಮಾಣದಲ್ಲಿ ಇನ್ಸುಲಿನ್ ಔಷಧ ಇಲ್ಲದಿರುವ ಅಂಶ ಪತ್ತೆಯಾಗಿದೆ.

ಫಾರ್ಮಸಿ ಕಾಲೇಜಿನ ವಿದ್ಯಾರ್ಥಿ ಗೌತಮ್ ಸತೀಶ್, ಪ್ರಾಂಶುಪಾಲ ಪ್ರೊ.ಎಂ.ಕೆ.ಉನ್ನಿಕೃಷ್ಣನ್ ಹಾಗೂ ಬೋಸ್ಟನ್ ವಿಶ್ವವಿದ್ಯಾಲಯದ ಸಂಶೋಧಕ ಅಭಿಷೇಕ್ ಶರ್ಮಾ ಸಂಶೋಧನೆ ನಡೆಸಿದ್ದರು.

ದೇಶದ ಮಾರುಕಟ್ಟೆಯಲ್ಲಿ ಸಿಗುವ ಶೇ.80 ರಷ್ಟು ಇನ್ಸುಲಿನ್ ಔಷಧಿಯನ್ನು ಭಾರತೀಯ ಕಂಪನಿಗಳೇ ತಯಾರಿಸುತ್ತಿವೆ. ಆದರೆ ಇವುಗಳನ್ನು ಮಾರುಕಟ್ಟೆಗೆ ಪೂರೈಸುತ್ತಿರುವವರಲ್ಲಿ ವಿದೇಶಿ ಕಂಪನಿಗಳೇ ಜಾಸ್ತಿ. 

ತಲಾ 5 ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆ, 30 ಔಷಧಿ ಮಳಿಗೆ ಹಾಗೂ ಜನೌಷಧ ಮಳಿಗೆಗಳಲ್ಲಿ ಮಾಹಿತಿ ಸಂಗ್ರಹಿಸಿ ಸಂಶೋಧನೆ ಮಾಡಲಾಗಿತ್ತು.

ಪ್ರತಿಕ್ರಿಯಿಸಿ (+)