ಬೆಂಗಳೂರು: ‘ಆರೋಗ್ಯ ಸೇವೆ, ಸೌಲಭ್ಯ ಎಂಬುದು ಸವಲತ್ತು ಮಾತ್ರವಲ್ಲ, ಯಾವುದೇ ವ್ಯಕ್ತಿಯ ಪರಿಸ್ಥಿತಿಯನ್ನು ಪರಿಗಣಿಸದೆ ಪ್ರತಿಯೊಬ್ಬರಿಗೂ ಸಿಗಬೇಕಾದ ಹಕ್ಕು’ ಎಂದು ನಟ ಡಾಲಿ ಧನಂಜಯ ಅಭಿಪ್ರಾಯಪಟ್ಟರು.

‘ಎಲ್ಲರಿಗೂ ಆರೋಗ್ಯ’ ಶೀರ್ಷಿಕೆಯಡಿ ಒಪನ್ ಟೆಕ್ಸ್ಟ್ ಆಯೋಜಿಸಿದ್ದ ‘ಸಮರ್ಥನಂ ಬೆಂಗಳೂರು ವಾಕಥಾನ್’ನ 18ನೇ ಆವೃತ್ತಿಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಯಾವುದೇ ನಾಗರಿಕ ಆರೋಗ್ಯ ಆರೈಕೆ ಸೌಲಭ್ಯದಿಂದ ದೂರ ಉಳಿಯದಂತೆ ನಾವೆಲ್ಲರೂ ಹೆಜ್ಜೆ ಇರಿಸಬೇಕು. ಪ್ರತಿಯೊಬ್ಬರೂ ಘನತೆಯಿಂದ ಜೀವಿಸುವಂತಾಗಬೇಕು. ನಾವೆಲ್ಲರೂ ಒಟ್ಟಾದರೆ ಎಲ್ಲ ರೀತಿಯ ಅಡೆತಡೆಗಳನ್ನು ಮುರಿಯಬಹುದು. ಆರೋಗ್ಯ ಮತ್ತು ಯೋಗ–ಕ್ಷೇಮವು ಸಾರ್ವತ್ರಿಕವಾಗಿ ಎಲ್ಲರಿಗೂ ಲಭ್ಯವಾಗುವಂತೆ ಮಾಡಬಹುದು. ಈ ವಾಕಥಾನ್ ಕೇವಲ ನಡೆಯಷ್ಟೇ ಅಲ್ಲ, ಹೃದಯ ಮತ್ತು ಮೆದುಳನ್ನು ಉತ್ತಮ ನಾಳೆಗಾಗಿ ಕಾರ್ಯನಿರ್ವಹಿಸುವಂತೆ ಮಾಡುವ ಚಲನೆಯಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಆರೋಗ್ಯ ಸೇವೆಗಳು ಎಲ್ಲ ನಾಗರಿಕರಿಗೂ ಲಭ್ಯವಾಗಬೇಕು. ಅಂಗವಿಕಲರಿಗೆ ಆರೋಗ್ಯ ಸೇವೆ ಅತ್ಯಂತ ಪ್ರಮುಖವಾದದ್ದು’ ಎಂದು ಶಾಸಕ ಸಿ.ಕೆ. ರಾಮಮೂರ್ತಿ ಹೇಳಿದರು.

ಸಮರ್ಥನಂ ಸಂಸ್ಥಾಪಕ ಡಾ.ಮಹಾಂತೇಶ್ ಜಿ. ಕಿವಡಸನ್ನವರ್ ಮಾತನಾಡಿ, ‘ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ವಾಕಥಾನ್ ಸ್ಫೂರ್ತಿಯುತವಾಗಿ ಮುಂದುವರಿದಿದೆ. ಈ ವರ್ಷ ‘ಎಲ್ಲರಿಗೂ ಆರೋಗ್ಯ’ ಶೀರ್ಷಿಕೆಯಡಿ ಆರೋಗ್ಯ ಸೇವೆಗಳ ಅಗತ್ಯ ಮತ್ತು ಅವುಗಳ ಲಭ್ಯತೆ ಬಗ್ಗೆ ಸಮರ್ಥನಂ ವತಿಯಿಂದ ಅರಿವು ಮೂಡಿಸಲಾಗುತ್ತಿದೆ. ಆರೋಗ್ಯ ವಿಷಯದಲ್ಲಿನ ನಿರ್ಲಕ್ಷ್ಯದಿಂದ ಕುಟುಂಬದ ಪ್ರೀತಿಪಾತ್ರರನ್ನು ಹಲವರು ಕಳೆದುಕೊಂಡಿದ್ದಾರೆ. ಆದ್ದರಿಂದ ಆರೋಗ್ಯ ಸೇವೆಗಳು ಎಲ್ಲರಿಗೂ ಲಭ್ಯವಾಗುವುದು ಅತಿಮುಖ್ಯವಾದದ್ದು’ ಎಂದು ಹೇಳಿದರು.

ಒಪನ್ಟೆಕ್ಸ್ಟ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮನೋಜ್ ನಾಗ್ಪಾಲ್, ಉಪಾಧ್ಯಕ್ಷ ಎಸ್. ಗುರುಪ್ರಸಾದ್, ಬ್ಲ್ಯೂಯಾಂಡರ್ನ ಸತೀಶ್ ಕುಮಾರ್, ಸಿಎಸ್ಸಿ ಐಟಿ ಗ್ಲೋಬಲ್ ಫಂಡ್ ಸಲ್ಯೂಷನ್ನ ಆನಂದ್ ಕೈಲಾಶ್, ಬಿಬಿಎಂಪಿ ಮಾಜಿ ಸದಸ್ಯ ಎನ್. ನಾಗರಾಜು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.