ಹೆಸರಘಟ್ಟ: ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ತೋಟಗೆರೆ ಬಸವಣ್ಣ ದೇವಸ್ಥಾನ ಕ್ಷೇತ್ರದಲ್ಲಿ ದನಗಳ ಜಾತ್ರೆ ಪ್ರಾರಂಭವಾಗಿದ್ದು, ರೈತರು ರಾಸುಗಳನ್ನು ಮಾರಾಟಕ್ಕಾಗಿ ಕರೆತರುತ್ತಿದ್ದಾರೆ.

ನೆಲಮಂಗಲ, ಹೊಸಕೋಟೆ, ಮಾಗಡಿ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ದೇವನಹಳ್ಳಿ ಭಾಗಗಳಿಂದ ರೈತರು ತಮ್ಮ ರಾಸುಗಳನ್ನು ಜಾತ್ರೆಯಲ್ಲಿ ಮಾರಾಟಕ್ಕಾಗಿ ಕರೆತರುತ್ತಾರೆ.

ಶಿವರಾತ್ರಿ ಹಬ್ಬದ ಹೊತ್ತಿಗೆ ಪೂರ್ಣಪ್ರಮಾಣದಲ್ಲಿ ಜಾತ್ರೆ ಆರಂಭವಾಗಲಿದ್ದು, ದನಗಳ ಜಾತ್ರೆ ಸೇರುವ ಜಾಗದಲ್ಲಿ ರೈತರು ತಮ್ಮ ರಾಸುಗಳನ್ನು ಕಟ್ಟಲು ಮಣ್ಣನ್ನು ಸಮತಟ್ಟುಗೊಳಿಸಿ, ಪೆಂಡಾಲ್ಗಳನ್ನು ನಿರ್ಮಿಸಿಕೊಂಡು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಲಕ್ಷಾಂತರ ರೂಪಾಯಿ ಮೌಲ್ಯದ ಜೋಡಿ ಹೋರಿಗಳನ್ನು ಹಾರ–ತುರಾಯಿಗಳಿಂದ ಅಲಂಕಾರ ಮಾಡಿ, ವಾದ್ಯ ಮೇಳಗಳೊಂದಿಗೆ ತೋಟಗೆರೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಬಸವಣ್ಣ ದೇವಸ್ಥಾನದವರೆಗೆ ಮೆರವಣಿಗೆ ಮಾಡಿ, ರೈತರು ಸಂಭ್ರಮಿಸುತ್ತಾರೆ.

‘ಈ ವರ್ಷ ಉತ್ತಮ ಮಳೆಯಾಗಿದ್ದು, ಸಾಕಷ್ಟು ಮೇವು ಸಂಗ್ರಹವಾಗಿರುವುದರಿಂದ ಜಾತ್ರೆಯಲ್ಲಿ ಹೆಚ್ಚು ಜಾನುವಾರುಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈಗಾಗಲೇ ವ್ಯಾಪಾರ–ವಹಿವಾಟು ನಡೆಯುತ್ತಿದ್ದು, ಶಿವರಾತ್ರಿ ಹಬ್ಬದವರೆಗೂ ದನಗಳ ಜಾತ್ರೆ ನಡೆಯುತ್ತದೆ’ ಎಂದು ರೈತ ಕೆಂಪರಾಜು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.