ಬೆಂಗಳೂರು: ನಿಯಮ ಮೀರಿ ಆಸ್ತಿ ನೋಂದಣಿ ಮಾಡಿದ ಆರೋಪದ ಮೇಲೆ ಬೆಂಗಳೂರು ನಗರ ವ್ಯಾಪ್ತಿಯ ಮೂವರು ಉಪ ನೋಂದಣಾಧಿ ಕಾರಿಗಳನ್ನು ಅಮಾನತು ಮಾಡಿ ನೋಂದಣಿ ಮಹಾ ಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಜಿಗಣಿಯ ಅಂಜಲಿ, ಹೆಸರಘಟ್ಟದ ಮಂಜುನಾಥ್ ಹಾಗೂ ಕಾಚರಕನಹಳ್ಳಿಯ ರೂಪ ಅಮಾನತುಗೊಂಡವರು.

ನೋಂದಣಿ ಮಾಡದಂತೆ ಸುಪ್ರೀಂ ಕೋರ್ಟ್ ಆದೇಶವಿದ್ದರೂ ಅಂಜಲಿ ಅವರು ಖಾಸಗಿ ಸಂಸ್ಥೆಯೊಂದಕ್ಕೆ ಸ್ವತ್ತು ನೋಂದಣಿ ಮಾಡಿಕೊಟ್ಟಿದ್ದಾರೆ. ಮಂಜುನಾಥ್ ಹಾಗೂ ರೂಪ ಅವರು ಇ–ಖಾತಾ ಕಡ್ಡಾಯ ಆದೇಶವನ್ನು ಪಾಲಿಸದೆ ಹಳೆಯ ವ್ಯವಸ್ಥೆ ಅಡಿ ನೋಂದಣಿ ಮಾಡುವ ಮೂಲಕ ಖಾಸಗಿ ವ್ಯಕ್ತಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆಂದು ಆದೇಶದಲ್ಲಿ ವಿವರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.