ಶುಕ್ರವಾರ, ಅಕ್ಟೋಬರ್ 23, 2020
22 °C

ಉದ್ಯೋಗ ನಿಯಮ ಪ್ರಶ್ನಿಸಿದ್ದ ಅರ್ಜಿ ವಜಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯ ಸರ್ಕಾರ ಜೂನ್ 30ರಂದು ಹೊರಡಿಸಿರುವ ಕರ್ನಾಟಕ ಕೈಗಾರಿಕಾ ಉದ್ಯೋಗ ನಿಯಮಗಳ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಗುರುವಾರ ವಜಾಗೊಳಿಸಿದೆ.

‘ಕೈಗಾರಿಕಾ ಉದ್ಯೋಗ ಕಾಯ್ದೆ ಪ್ರಕಾರ ಯಾವುದೇ ನಿಯಮ ರೂಪಿಸುವಾಗ ಅಥವಾ ತಿದ್ದುಪಡಿ ತರುವಾಗ ಕಾರ್ಮಿಕ ಪ್ರತಿನಿಧಿಗಳ ಜತೆ ಸಮಾಲೋಚನೆ ನಡೆಸಿಲ್ಲ. ಕಾಯಂ ನೌಕರರು ಮತ್ತು ಗುತ್ತಿಗೆ ಆಧಾರದ ನೌಕರರಿಗೆ ಇರುವ ಸೌಲಭ್ಯಗಳಲ್ಲಿ ವ್ಯತ್ಯಾಸವಿದೆ’ ಎಂದು ಕರ್ನಾಟಕ ಕೈಗಾರಿಕೆ ಮತ್ತು ಇತರ ಉದ್ಯಮಗಳ ನೌಕರರ ಒಕ್ಕೂಟ ಅರ್ಜಿ ಸಲ್ಲಿಸಿತ್ತು.

‘ಪ್ರತ್ಯೇಕ ವರ್ಗದ ಕಾರ್ಮಿಕರ ವೇತನ, ಕೆಲಸದ ಸಮಯ ಮತ್ತು ಇತರ ಷರತ್ತುಗಳು ಸಾಮಾನ್ಯ ಉದ್ಯೋಗಿಗಳಿಗೆ ಸಮನಾಗಿವೆ’ ಎಂದು ಪೀಠ ಹೇಳಿತು.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು