ಶುಕ್ರವಾರ, ಜೂನ್ 25, 2021
29 °C

ಹಿಂದಿ ವಾಕ್ಯ ಅಳಿಸಿದ ಕರವೇ ಕಾರ್ಯಕರ್ತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕಾಯಕ್‌ ಹಿ ಕೈಲಾಸ್’ ಎಂದು ಹಿಂದಿಯಲ್ಲಿ ಬರೆದಿರುವುದು

ಬೆಂಗಳೂರು: ಚಾಲುಕ್ಯ ವೃತ್ತದಲ್ಲಿ ಶೀಘ್ರದಲ್ಲಿಯೇ ಉದ್ಘಾಟನೆಗೊಳ್ಳಲಿರುವ ಬಸವಣ್ಣನವರ ಪುತ್ಥಳಿ ಹಿಂದಿನ ಮಂಟಪದ ಮೇಲೆ ಹಿಂದಿಯಲ್ಲಿ ಬರೆದಿದ್ದ ವಾಕ್ಯವನ್ನು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ಗುರುವಾರ ನಸುಕಿನ ಜಾವ ತೆಗೆದು ಹಾಕಿದ್ದಾರೆ. 

‘ಪುತ್ಥಳಿಯ ಹಿಂದೆ ಕಾಯಕವೇ ಕೈಲಾಸ ಎನ್ನುವುದನ್ನು ಕನ್ನಡ, ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ಬರೆಯಲಾಗಿತ್ತು. ‘ಕಾಯಕ್‌ ಹಿ ಕೈಲಾಸ್‌’’ ಎಂಬ ಸಾಲು ತೆಗೆಯಬೇಕು, ಹಿಂದಿ ಹೇರಿಕೆಗೆ ಅವಕಾಶ ನೀಡಬಾರದು ಎಂದು ಬಿಬಿಎಂಪಿ ಆಯುಕ್ತರು ಮತ್ತು ಮೇಯರ್‌ ಅವರಿಗೆ ಮನವಿ ಮಾಡಿದ್ದೆವು. ಆದರೆ, ಸ್ಪಂದಿಸಲಿಲ್ಲ. ಅದಕ್ಕೆ ನಾವೇ ಆ ವಾಕ್ಯವನ್ನು ತೆಗೆಯಬೇಕಾಯಿತು’ ಎಂದು ಕರವೇ ಪದ್ಮನಾಭನಗರ ಕ್ಷೇತ್ರ ಘಟಕದ ಅಧ್ಯಕ್ಷ ಮನು ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು