ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವೈಕ್ಯತೆ ಸಾರಿದ ಗಂಗೊಂಡನಹಳ್ಳಿ ದೇವಿ ಊರ ಹಬ್ಬ: ಬೆಂಗಳೂರು ಮಸೀದಿ ಎದುರು ಸಂಭ್ರಮ

Last Updated 10 ಮೇ 2022, 8:42 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಚಂದ್ರಾ ಲೇಔಟ್ ಬಳಿಯ ಗಂಗೊಂಡನಹಳ್ಳಿ ದೇವಿ ಊರ ಹಬ್ಬವನ್ನು ಸ್ಥಳೀಯರು ಸಂಭ್ರಮದಿಂದ ಆಚರಿಸಿದರು. ಹಿಂದೂ ಹಾಗೂ ಮುಸ್ಲಿಂ ಬಾಂಧವರು ಒಟ್ಟಾಗಿ ಹಬ್ಬದಲ್ಲಿ ಪಾಲ್ಗೊಂಡು ಭಾವೈಕ್ಯತೆ ಸಾರಿದರು.

ಗಂಗೊಂಡನಹಳ್ಳಿಯಲ್ಲಿ ಮಂಗಳವಾರ ಬೆಳಿಗ್ಗೆ ದೇವಿ‌ ಮೂರ್ತಿ ಮೆರವಣಿಗೆ ನಡೆಯಿತು. ಸ್ಥಳೀಯ ಮಸೀದಿ ಎದುರು ದೇವಿ‌ಮೂರ್ತಿ ಬರುತ್ತಿದ್ದಂತೆ, ಮುಸ್ಲಿಂ ಸಮುದಾಯದ ಜನರು ಭಕ್ತಿಯಿಂದ ಬರಮಾಡಿಕೊಂಡರು.

ಮೆರವಣಿಗೆಯಲ್ಲಿ ‌ಪಾಲ್ಗೊಂಡಿದ್ದವರಿಗೆ ಜ್ಯೂಸ್ ಕೊಟ್ಟು ಉಪಚರಿಸಿದರು. ತಾವೂ ದೇವಿ ಮೂರ್ತಿಗೆ ನಮಿಸಿ, ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರು.ಮೆರವಣಿಗೆಯಲ್ಲಿದ್ದ ಹಿಂದೂಗಳನ್ನು ತಬ್ಬಿಕೊಂಡು ಹಬ್ಬದ ಶುಭಾಶಯ ಕೋರಿದರು. ಎರಡೂ ಸಮುದಾಯದ ಜನ ಪರಸ್ಪರ ಕೈ ಕೈ ಹಿಡಿದು, 'ನಾವೆಲ್ಲರೂ ಒಂದೇ' ಎಂಬ ಸಂದೇಶ ಸಾರಿದರು.

ನಂತರ, ದೇವಿ‌ ಮೂರ್ತಿ ಹಾಗೂ ಸ್ನೇಹಿತರ ಜೊತೆ ಫೋಟೊ‌ ಕ್ಲಿಕ್ಕಿಸಿಕೊಂಡರು. ಕೆಲ ಮುಸ್ಲಿಂರು, ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

ಮುಂಜಾಗ್ರತಾ ಕ್ರಮವಾಗಿ ಮಸೀದಿ ಎದುರು ಪೊಲೀಸರು‌ ಭದ್ರತೆ ಕೈಗೊಂಡಿದ್ದರು. ಆದರೆ, ಎರಡು ಸಮುದಾಯದವರ ಸೌಹಾರ್ದತೆ ಕಂಡು ಪೊಲೀಸರೂ ಖುಷಿಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT