ಶನಿವಾರ, ಜೂನ್ 25, 2022
24 °C

ನಾಳೆಯಿಂದ ಹಾಪ್‌ಕಾಮ್ಸ್‌ ಮಾವು ಮೇಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಂದರ್ಭಿಕ ಚಿತ್ರ

ಬೆಂಗಳೂರು: ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣಾ ಸಂಘದ (ಹಾಪ್‌ಕಾಮ್ಸ್‌) ವತಿಯಿಂದ ಮೇ 20ರಿಂದ ಜೂನ್‌ 5ರವರೆಗೆ ವಿಶೇಷ ಮಾವು ಮಾರಾಟ ಮೇಳವನ್ನು ನಾಗವಾರ ಜಂಕ್ಷನ್‌ ಬಳಿಯ ಎಲಿಮೆಂಟ್ಸ್‌ ಮಾಲ್‌ನಲ್ಲಿ ಆಯೋಜಿಸಲಾಗಿದೆ. 

ಬಾದಾಮಿ, ರಸಪುರಿ, ಬೈಗನ್‌ಪಲ್ಲಿ, ಮಲ್ಲಿಕಾ, ಮಲಗೋವಾ, ಸಿಂಧೂರ, ಕೇಸರ್, ತೋತಾಪುರಿ ಸೇರಿದಂತೆ ವಿವಿಧ ತಳಿಗಳ ಮಾವು ಖರೀದಿಗೆ ಲಭ್ಯ. ಉಪ್ಪಿನಕಾಯಿ ತಯಾರಿಗೆ ಉಪಯೋಗಿಸುವ ವಿವಿಧ ಮಾವಿನಕಾಯಿ ಮೇಳದಲ್ಲಿ ಇರಲಿದೆ.

ಮಾವು ಬೆಳೆಗೆ ಸಂಬಂಧಿಸಿದ ಬೇಸಾಯ ಪದ್ಧತಿ, ಕಸಿ ಕಟ್ಟುವಿಕೆ, ಮಾವು ಮಾಗಿಸುವುದು, ವಿವಿಧ ಸಂಸ್ಕರಣಾ ಪದಾರ್ಥಗಳ ತಯಾರಿ ಕುರಿತು ಮೇಳದಲ್ಲಿ ತಜ್ಞರು ಮಾಹಿತಿ ನೀಡಲಿದ್ದಾರೆ. 

20ರಂದು ಮಧ್ಯಾಹ್ನ 12 ಗಂಟೆಗೆ ಹಾಪ್‌ಕಾಮ್ಸ್‌ ಅಧ್ಯಕ್ಷ ಎನ್.ದೇವರಾಜ್ ಮೇಳ ಉದ್ಘಾಟಿಸಲಿದ್ದಾರೆ. ಎಲಿಮೆಂಟ್ಸ್‌ ಮಾಲ್‌ನ ಘಟಕದ ಮುಖ್ಯಸ್ಥ ಉದಯ ನರೇಶ್, ಮಾರಾಟ ವಿಭಾಗದ ವಿವೇಕ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.