ಮಗುವೊಂದು ಪಟಾಕಿ ಖರೀದಿಯಲ್ಲಿ ತೊಡಗಿರುವುದು
ಪ್ರಜಾವಾಣಿ ಚಿತ್ರ
ಹೊಸೂರಿನ ಪಟಾಕಿ ಮಳಿಗೆಯಲ್ಲಿ ಜನರು ಪಟಾಕಿ ಖರೀದಿಸಿದರು
ಪ್ರಜಾವಾಣಿ ಚಿತ್ರ
ಪ್ರತಿವರ್ಷ ಅಪ್ಪ ಬಂದು ಪಟಾಕಿ ಖರೀದಿಸುತ್ತಿದ್ದರು. ಈ ಬಾರಿ ನಾನೇ ಬಂದಿದ್ದೇನೆ. ಬೆಂಗಳೂರಿನಲ್ಲಿ ಸ್ಟ್ರಾಂಡರ್ಡ್ ಕಂಪನಿಯ ಪಟಾಕಿಗಳಿಗೆ ಶೇ 35ರಿಂದ ಶೇ 40 ರಿಯಾಯಿತಿ ಲೋಕಲ್ ಕಂಪನಿಗಳಿಗೆ ಶೇ 45ರಷ್ಟು ರಿಯಾಯಿತಿ ದೊರೆತರೆ ಇಲ್ಲಿ ಅದರ ಡಬಲ್ ರಿಯಾಯಿತಿ ಸಿಗುತ್ತದೆ
ಆದಿತ್ಯ, ಕೆಂಗೇರಿ
ಮಂಗಳೂರಿನಲ್ಲಿ ಪಟಾಕಿ ದರ ದುಬಾರಿ ಆಗಿರುವುದರಿಂದ ನಾವು ಮೂರ್ನಾಲ್ಕು ಸ್ನೇಹಿತರು ಸೇರಿ ಹೊಸೂರಿಗೆ ಬಂದು ಪ್ರತಿವರ್ಷ ಮನೆಗೆ ಪಟಾಕಿ ಖರೀದಿಸಿ ಒಯ್ಯುತ್ತಿದ್ದೆವು. ಈ ಬಾರಿ ಉಪ್ಪಿನಂಗಡಿಯಲ್ಲಿ ಪಟಾಕಿ ಅಂಗಡಿಯನ್ನೇ ಹಾಕುತ್ತಿದ್ದೇವೆ.
ಸಚಿನ್, ಉಪ್ಪಿನಂಗಡಿ
ನಾವು ಫ್ಯಾಮಿಲಿ ಜೊತೆಗೆ ಬಂದಿದ್ದೇವೆ. ಮಕ್ಕಳಿಗೆ ಪಟಾಕಿ ಅಂದರೆ ಇಷ್ಟ. ಮಕ್ಕಳ ಇಷ್ಟವನ್ನೂ ನೋಡಿಕೊಂಡು ಪರಿಸರಕ್ಕೂ ಹಾನಿಯಾಗದಂತೆ ಇರುವ ಪಟಾಕಿಗಳನ್ನು ಖರೀದಿ ಮಾಡಿದ್ದೇವೆ.