ಸೋಮವಾರ, ಸೆಪ್ಟೆಂಬರ್ 20, 2021
24 °C

ಅಪೋಲೊ ಆಸ್ಪತ್ರೆ: 100 ರೊಬೊಟಿಕ್ ಹೃದಯ ಶಸ್ತ್ರಚಿಕಿತ್ಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಅಪೋಲೊ ಆಸ್ಪತ್ರೆಯು ಯಶಸ್ವಿಯಾಗಿ ನೂರು ರೊಬೊಟಿಕ್ ಹೃದಯ ಶಸ್ತ್ರಚಿಕಿತ್ಸೆಗಳನ್ನು ನಡೆಸಿದೆ.

ವೈದ್ಯಕೀಯ ಕ್ಷೇತ್ರದಲ್ಲಿ ಇದು ಮೈಲುಗಲ್ಲು ಎಂದು ಆಸ್ಪತ್ರೆ ತಿಳಿಸಿದೆ. ಆಸ್ಪತ್ರೆಯ ಶಸ್ತ್ರಚಿಕಿತ್ಸಾ ತಂಡವು ‘ಡ ವಿಂಚಿ ರೊಬೊಟ್’ ನೆರವಿನಿಂದ ಸಂಕೀರ್ಣವಾದ ಮಿಟ್ರಲ್ ವಾಲ್ವ್‌ನ ಹೃದಯ ಶಸ್ತ್ರಚಿಕಿತ್ಸೆಯನ್ನು 70 ನಿಮಿಷಗಳಲ್ಲಿ ಪೂರ್ಣಗೊಳಿದೆ. ಸಾಂಪ್ರದಾಯಿಕ ವಿಧಾನದಲ್ಲಿ ಈ ಶಸ್ತ್ರಚಿಕಿತ್ಸೆಗೆ 3ರಿಂದ 4 ಗಂಟೆಗಳು ಬೇಕಾಗುತ್ತವೆ ಎಂದು ಆಸ್ಪತ್ರೆ ತಿಳಿಸಿದೆ. 

ಆಸ್ಪತ್ರೆಯು 2019ರ ಅಂತ್ಯಕ್ಕೆ ರೊಬೊಟಿಕ್ ಯಂತ್ರವನ್ನು ಅಳವಡಿಸಿಕೊಂಡಿತ್ತು. ಹೃದ್ರೋಗ ತಜ್ಞ ಹಾಗೂ ಆಸ್ಪತ್ರೆಯ ರೊಬೊಟಿಕ್ ಹೃದಯ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ‌ ಡಾ. ಸತ್ಯಕಿ ಪಿ. ನಂಬಾಳ ನೇತೃತ್ವದಲ್ಲಿ ಆಸ್ಪತ್ರೆ ಈ ಸಾಧನೆ ಮಾಡಿದೆ.

‘ರೊಬೊಟ್‌ಗಳ ನೆರವಿನಿಂದ ಅತ್ಯಂತ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನೂ ಅಲ್ಪಾವಧಿಯಲ್ಲಿ ನಡೆಸಬಹುದು. ರೋಗಿಯೂ ಬೇಗ ಚೇತರಿಸಿಕೊಂಡು, 48 ಗಂಟೆಯೊಳಗೆ ಮನೆಗೆ ಮರಳಬಹುದು. ತೆರೆದ ಹೃದಯದ ಶಸ್ತ್ರಚಿಕಿತ್ಸೆಯನ್ನು ಕೆಲ ರಂಧ್ರಗಳ ಮೂಲಕ ನಡೆಸಲಾಗುತ್ತದೆ. ಹೃದಯದಲ್ಲಿನ ರಂಧ್ರಗಳನ್ನು ಸುಲಭವಾಗಿ ಮುಚ್ಚಬಹುದು. ಇದರಿಂದ ಬೈಪಾಸ್‌ ಸರ್ಜರಿ ಸುಲಭವಾಗಿದೆ’ ಎಂದು ಡಾ. ಸತ್ಯಕಿ ಪಿ. ನಂಬಾಳ ತಿಳಿಸಿದರು. 

ಅಪೋಲೊ ಸಮೂಹ ಆಸ್ಪತ್ರೆಗಳ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಡಾ. ಸಂಗೀತಾ ರೆಡ್ಡಿ, ‘ರೋಗಿಗಳ ಅನುಕೂಲಕ್ಕಾಗಿ ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನಗಳ ಅಳವಡಿಕೆಗೆ ಆಸ್ಪತ್ರೆ ಆದ್ಯತೆ ನೀಡುತ್ತಿದೆ. ಇಲ್ಲಿನ ಸೌಲಭ್ಯವನ್ನು ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಪಡೆದುಕೊಳ್ಳಬೇಕು. ‘ಡ ವಿಂಚಿ’ ಶಸಚಿಕಿತ್ಸಾ ವ್ಯವಸ್ಥೆಯು ಅತ್ಯುತ್ತಮ ಫಲಿತಾಂಶ ಒದಗಿಸುವಲ್ಲಿ ಸಹಕಾರಿ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು