ಬೆಂಗಳೂರು: ಸುದ್ದಗುಂಟೆ ಪಾಳ್ಯದ ಭಾರತಿ ಲೇಔಟ್ನ ಒಂದನೇ ಕ್ರಾಸ್ನಲ್ಲಿ ಯುವತಿ ಜತೆಗೆ ಅನುಚಿತ ವರ್ತನೆ ತೋರಿ ಪರಾರಿ ಆಗಿರುವ ಆರೋಪಿ, ನೀಲಿ ಬಣ್ಣದ ಸ್ಕೂಟರ್ನಲ್ಲಿ ನಗರದ ವಿವಿಧೆಡೆ ಸುತ್ತಾಟ ನಡೆಸುತ್ತಿರುವುದು ಪತ್ತೆಯಾಗಿದೆ.

‘ಆರೋಪಿಯ ಪತ್ತೆಗೆ ಸುದ್ದಗುಂಟೆ ಠಾಣೆಯ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಘಟನೆ ನಡೆದ ಸುತ್ತಮುತ್ತ ಅಳವಡಿಸಿದ್ದ ಸಿ.ಸಿ.ಟಿ.ವಿ ಕ್ಯಾಮೆರಾಗಳ ದೃಶ್ಯಾವಳಿಯನ್ನು ಪರಿಶೀಲನೆ ನಡೆಸಿದ್ದಾರೆ. ಘಟನೆಯು ಏಪ್ರಿಲ್ 3ರಂದು ರಾತ್ರಿ ನಡೆದಿದೆ. ಘಟನೆ ನಡೆದು ಎರಡು ದಿನಗಳ ಬಳಿಕ ಆರೋಪಿಯು ನೀಲಿ ಬಣ್ಣದ ಸ್ಕೂಟರ್ನಲ್ಲಿ ಓಡಾಟ ನಡೆಸಿರುವುದು ಪತ್ತೆಯಾಗಿದೆ’ ಎಂದು ಮೂಲಗಳು ತಿಳಿಸಿವೆ.
.ಬೆಂಗಳೂರು: ಯುವತಿ ಜೊತೆ ಅನುಚಿತ ವರ್ತನೆ.
‘ಆರೋಪಿಯ ಪತ್ತೆಗಾಗಿ ಸಿ.ಸಿ.ಟಿ.ವಿ.ಗಳ ಕ್ಯಾಮೆರಾದಲ್ಲಿ ಸೆರೆಯಾದ 300ಕ್ಕೂ ಅಧಿಕ ದೃಶ್ಯಾವಳಿಗಳನ್ನು ಪರಿಶೀಲಿಸಿ, ವಿಶ್ಲೇಷಣೆ ಒಳಪಡಿಸಲಾಗಿತ್ತು. ಯಾವುದೇ ದೃಶ್ಯದಲ್ಲೂ ಸ್ಕೂಟರ್ ನೋಂದಣಿ ಸಂಖ್ಯೆ ಸೆರೆಯಾಗಿಲ್ಲ. ಆದರೆ, ಆರೋಪಿ ಕಪ್ಪು ಬಣ್ಣದ ಪ್ಯಾಂಟ್ ಹಾಗೂ ಅಂಗಿ ಧರಿಸಿ ಓಡಾಟ ನಡೆಸುತ್ತಿರುವುದು ಸೆರೆಯಾಗಿದೆ. ಆರೋಪಿ ಕುರಿತು ಕೆಲವು ಮಾಹಿತಿಗಳು ಸಿಕ್ಕಿವೆ. ಅದನ್ನು ಆಧರಿಸಿ ಆರೋಪಿಯನ್ನು ವಶಕ್ಕೆ ಪಡೆಯಲು ಕಾರ್ಯಾಚರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಯುವತಿ ತನ್ನ ಸ್ನೇಹಿತೆ ಜತೆಗೆ ನಡೆದು ತೆರಳುತ್ತಿದ್ದರು. ಆಗ ಆರೋಪಿ ಸ್ಕೂಟರ್ ಅನ್ನು ರಸ್ತೆ ಬದಿಯಲ್ಲಿ ನಿಲುಗಡೆ ಮಾಡಿ ಹಿಂಬಾಲಿಸಿಕೊಂಡು ಬರುತ್ತಾನೆ. ಬಂದವನೇ ಏಕಾಏಕಿ ಯುವತಿಯನ್ನು ತಬ್ಬಿಕೊಂಡು ಆಕೆಯ ಎದೆಯ ಭಾಗವನ್ನು ಮುಟ್ಟಿ ಪರಾರಿ ಆಗುತ್ತಾನೆ. ಈ ದೃಶ್ಯವು ಸಿ.ಸಿ.ಟಿ.ವಿ ಕ್ಯಾಮೆರಾವೊಂದರಲ್ಲಿ ಸೆರೆಯಾಗಿದೆ.
.ಯುವತಿ ಜತೆ ಅನುಚಿತ ವರ್ತನೆ: ದೂರು ಪಡೆಯಲು ನಿರಾಕರಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.