ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂತನ ಶಿಲಾವಿಗ್ರಹದ ಪ್ರತಿಷ್ಠಾಪನೆ

Last Updated 17 ಜುಲೈ 2021, 3:25 IST
ಅಕ್ಷರ ಗಾತ್ರ

ಯಲಹಂಕ: ಬ್ಯಾಟರಾಯನಪುರ ಕ್ಷೇತ್ರದ ರಾಮಚಂದ್ರಪುರದ ರಘುರಾಂ ಬಡಾವಣೆಯಲ್ಲಿ ಜೀರ್ಣೋದ್ಧಾರಗೊಳಿಸಿರುವ ಕಲ್ಯಾಣರಾಮ ದೇವಸ್ಥಾನದಲ್ಲಿ ಶ್ರೀರಾಮಚಂದ್ರ, ಸೀತಾ, ಲಕ್ಷ್ಮಣ ಸಮೇತ ಆಂಜನೇಯ ಸ್ವಾಮಿಯ ನೂತನ ಶಿಲಾವಿಗ್ರಹದ ಪ್ರತಿಷ್ಠಾಪನೆ ಶುಕ್ರವಾರ ನಡೆಯಿತು.

ದೇವರಿಗೆಬೆಳಿಗ್ಗೆಯಿಂದಲೇ ವಿವಿಧ ರೀತಿಯ ಅಭಿಷೇಕ,ಹೋಮ ಹಾಗೂ ಪೂಜಾ ಕೈಂಕರ್ಯಗಳು ನಡೆದವು. ಪ್ರತಿಷ್ಠಾಪನೆ ಅಂಗವಾಗಿ ಮಹಿಳೆಯರು ಕಳಶಗಳನ್ನು ಹೊತ್ತು ಗ್ರಾಮದಲ್ಲಿ ಮೆರವಣಿಗೆ ನಡೆಸಿದರು. ನಂತರ ದೇವಸ್ಥಾನದ ಗೋಪುರದಲ್ಲಿರುವ ಕಳಶಕ್ಕೆ ಕ್ರೇನ್ ಮೂಲಕ ಕ್ಷೀರಾಭಿಷೇಕ ಮಾಡಲಾಯಿತು.

‘ಆಟದ ಮೈದಾನ ಮತ್ತು ಉದ್ಯಾನಕ್ಕೆ ಹೊಂದಿಕೊಂಡಿರುವ ಈ ದೇವಾಲಯದ ಜೀರ್ಣೋದ್ಧಾರ ನಡೆದಿರುವುದರಿಂದ ವಾಯುವಿಹಾರಕ್ಕೆ ಬರುವವರು ಹಾಗೂ ಸಾರ್ವಜನಿಕರು ದೇವಸ್ಥಾನದ ಆವರಣದಲ್ಲಿ ಕುಳಿತು ವಿಶ್ರಾಂತಿಸಲು ಅನುಕೂಲವಾಗಲಿದೆ’ ಎಂದುಶಾಸಕ ಕೃಷ್ಣಬೈರೇಗೌಡ ತಿಳಿಸಿದರು.

ಮುಖಂಡರಾದ ಆರ್.ಎಂ.ಶ್ರೀನಿವಾಸ್, ಎನ್.ಎನ್.ಶ್ರೀನಿವಾಸಯ್ಯ, ಬಿ.ಎಸ್.ಗೋಪಾಲಕೃಷ್ಣ, ಸುಧಾಕರ್, ಪಟೇಲ್ ಪಿಳ್ಳೇಗೌಡ, ಪಟೇಲ್ ಮಂಜಣ್ಣ, ಮುನಿಯಪ್ಪ, ಅಶ್ವತ್ಥನಾರಾಯಣ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT