ಬೆಂಗಳೂರು: ಭಾರತವನ್ನು ಅಗರಬತ್ತಿ ಉತ್ಪಾದನೆಯ ಕೇಂದ್ರವನ್ನಾಗಿ ರೂಪಿಸಲು ನಗರದಲ್ಲಿ ‘ಅಂತರರಾಷ್ಟ್ರೀಯ ಅಗರಬತ್ತಿ ಎಕ್ಸ್ ಪೊ ಮತ್ತು ಸಮ್ಮೇಳನ’ ಆಯೋಜಿಸಲಾಗಿದೆ ಎಂದು ಅಖಿಲ ಭಾರತ ಅಗರಬತ್ತಿ ತಯಾರಕರ ಅಸೋಸಿಯೇಷನ್ (ಎಐಎಎಂಎ) ಎಕ್ಸ್ ಪೊ 25ರ ಅಧ್ಯಕ್ಷ ಅರ್ಜುನ್ ರಂಗಾ ತಿಳಿಸಿದರು.

ನವೆಂಬರ್ 6 ರಿಂದ 8ರವರೆಗೆ ನಗರದ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ನಡೆಯಲಿರುವ ಎಕ್ಸ್ ಪೊದಲ್ಲಿ ವಿಯೆಟ್ನಾಂ, ಇಂಡೋನೆಷ್ಯಾ, ಯುರೋಪ್ ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಉದ್ಯೋಗ ಸೃಷ್ಟಿ, ಕಚ್ಛಾ ವಸ್ತುಗಳ ಸಂಗ್ರಹ, ಹೊಸ ಸುಗಂಧಗಳ ಸಂಶೋಧನೆ, ಪ್ಯಾಕೇಜಿಂಗ್ ಅಭಿವೃದ್ಧಿ, ಮಹಿಳಾ ಸಬಲೀಕರಣ, ರಫ್ತು ಅವಕಾಶ ಮತ್ತು ಆಧುನಿಕ ಮಾರುಕಟ್ಟೆ ಕುರಿತ ವಿಚಾರ ಸಂಕಿರಣಗಳು ನಡೆಯಲಿವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೆಲವು ವರ್ಷಗಳಿಂದ ಅಗರಬತ್ತಿಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆ ಹೆಚ್ಚಾಗಿದ್ದು, 120 ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ದೇಶದಲ್ಲಿ ₹ 8 ಸಾವಿರ ಕೋಟಿ ವಹಿವಾಟು ನಡೆಯುತ್ತಿದೆ. ನೇರ ಹಾಗೂ ಪರೋಕ್ಷವಾಗಿ ಎರಡು ಲಕ್ಷ ಮಂದಿಗೆ ಉದ್ಯೋಗ ಅವಕಾಶ ಕಲ್ಪಿಸಿದೆ. ಅದರಲ್ಲೂ ಮಹಿಳೆಯರಿಗೆ ಹೆಚ್ಚಿನ ಉದ್ಯೋಗಾವಕಾಶ ದೊರೆತಿದೆ. ಹಾಗಾಗಿ ಭಾರತವನ್ನು ಅಗರಬತ್ತಿ ಉತ್ಪಾದನೆಯ ಜಾಗತಿಕ ಕೇಂದ್ರವಾಗಿ ರೂಪಿಸುವ ಗುರಿ ಹೊಂದಲಾಗಿದೆ ಎಂದು ವಿವರಿಸಿದರು.

ಅಮೃತ ಆರೋಮಾಟಿಕ್ಸ್ ನಿರ್ದೇಶಕ ಟಿ.ವಿ.ಕೃಷ್ಣ ಮಾತನಾಡಿ, ಎಐಎಂಎನಲ್ಲಿ 800ಕ್ಕೂ ಹೆಚ್ಚು ಸದಸ್ಯರು ಇದ್ದಾರೆ. ಉದ್ಯಮಿಗಳ ಜತೆ ಸಂವಾದ, ವಿಚಾರ ಸಂಕಿರಣಗಳು ನಡೆಯಲಿವೆ. 250 ಮಳಿಗೆಗಳಲ್ಲಿ ಉತ್ಪನ್ನಗಳನ್ನು ಪ್ರದರ್ಶಿಸಲಾಗುವುದು. ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಎಐಎಎಂಎ ಮಾಜಿ ಅಧ್ಯಕ್ಷ ಪಿ.ಎಸ್. ಶರತ್ ಬಾಬು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.