ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಯೋಡಿನ್‌ ಕೊರತೆ | ಜಾಗೃತಿ ಅಗತ್ಯ: ಸಚಿವ ಡಾ.ಎಂ.ಸಿ.ಸುಧಾಕರ್

'ಆಶಿರ್ವಾದ್‌ ಸ್ಮಾರ್ಟ್‌ ಇಂಡಿಯಾ'ಗೆ ಸಚಿವ ಸುಧಾಕರ್‌ ಚಾಲನೆ
Published : 1 ಅಕ್ಟೋಬರ್ 2024, 23:01 IST
Last Updated : 1 ಅಕ್ಟೋಬರ್ 2024, 23:01 IST
ಫಾಲೋ ಮಾಡಿ
Comments

ಬೆಂಗಳೂರು: ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಹಾಗೂ ಮಕ್ಕಳ ಬುದ್ದಿ ಬೆಳವಣಿಗೆಗೆ ಅಯೋಡಿನ್‌ನ ಅತ್ಯವಶ್ಯಕ. ಆದರೆ, ಬಡತನದ ಹಿನ್ನೆಲೆ ಇರುವವರು ಅಯೋಡಿನ್‌, ಪ್ರೋಟಿನ್‌, ವಿಟಮಿನ್‌ಯುಕ್ತ ಆಹಾರದಿಂದ ವಂಚಿತರಾಗುತ್ತಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು. 

ಐಟಿಸಿ ಹಾಗೂ ಇನ್‌ಸ್ಟಿಟ್ಯೂಟ್ ಆಫ್ ಗ್ಲೋಬಲ್ ಡೆವಲಪ್‌ಮೆಂಟ್(ಐಜಿಡಿ) ಸಹಯೋಗದಲ್ಲಿ ಸೋಮವಾರ ನಡೆದ ‘ಆಶಿರ್ವಾದ್‌ ಸ್ಮಾರ್ಟ್‌ ಇಂಡಿಯಾ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಅಯೋಡಿನ್‌ ಕೊರತೆಯ ಬಗ್ಗೆ ಜಾಗೃತಿ ಮೂಡಿಸುವ ‘ಆಶೀರ್ವಾದ್‌ ಸ್ಮಾರ್ಟ್‌ ಇಂಡಿಯಾ’ ಕಾರ್ಯಕ್ರಮ ಹೆಚ್ಚು ಪ್ರಸ್ತುತ. ಸರ್ಕಾರವು ಈಗಾಗಲೇ ಅಜೀಂ ಪ್ರೇಮ್‌ಜೀ ಫೌಂಡೇಷನ್‌ ಸಹಕಾರದಿಂದ ವಾರದಲ್ಲಿ ಆರು ದಿನವೂ ಮಕ್ಕಳಿಗೆ ಮೊಟ್ಟೆ ನೀಡುತ್ತಿದೆ. ಜೊತೆಗೆ ಮಕ್ಕಳಿಗೆ ಹಾಲು ಸಹ ನೀಡಲಾಗುತ್ತಿದೆ. ಇದರಿಂದ ಮಕ್ಕಳಿಗೆ ಬೇಕಾದ ಅಯೋಡಿನ್‌ ದೊರೆಯುತ್ತಿದೆ ಎಂದು ತಿಳಿಸಿದರು.

ಐಟಿಸಿ ಲಿಮಿಟೆಡ್‌ನ ಸ್ಟೇಪಲ್ಸ್ ಆ್ಯಂಡ್‌ ಅಡ್ಜೆಸೆನ್ಸಿಸ್‌ನ ಅನುಜ್ ರುಸ್ತಗಿ ಮಾತನಾಡಿ, ‘ಆಶೀರ್ವಾದ್ ಸ್ಮಾರ್ಟ್‌ ಇಂಡಿಯಾ’ ಕಾರ್ಯಕ್ರಮದಡಿ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ 30 ಜಿಲ್ಲೆಗಳಲ್ಲಿ ಅಯೋಡಿನ್ ಕೊರತೆಯ ಪರಿಣಾಮ ಹಾಗೂ ಕೊರತೆ ನೀಗಿಸಲು ಅಗತ್ಯವಾದ ಆಹಾರ ಪದ್ಧತಿಗಳ ಬಗ್ಗೆ ಅರಿವು ಮೂಡಿಸುವ ಗುರಿ ಹೊಂದಲಾಗಿದೆ’ ಎಂದು ಹೇಳಿದರು. 

ಐಡಿಡಿ ಯೋಜನಾ ನಿರ್ದೇಶಕ ಡಾ.ಶಾಂತನು ಶರ್ಮಾ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT