ಭಾನುವಾರ, ಫೆಬ್ರವರಿ 23, 2020
19 °C

‘ಡಿ.ಕೆ.ಶಿವಕುಮಾರ್‌ ಏನು ಟಾಟಾ– ಬಿರ್ಲಾನಾ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:‘ಆರ್‌ಎಸ್‌ಎಸ್‌ನವರಿಗೆ ಊಟ ಹಾಕ್ತೀನಿ ಎನ್ನುವ ಡಿ.ಕೆ.ಶಿವಕುಮಾರ್‌ ಅವರು ಟಾಟಾನಾ– ಬಿರ್ಲಾನಾ’ ಎಂದು ಕಂದಾಯ ಸಚಿವ ಆರ್‌.ಅಶೋಕ ಲೇವಡಿ ಮಾಡಿದ್ದಾರೆ.

ವಿಧಾನಸೌಧದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ‘ಆರ್‌ಎಸ್‌ಎಸ್‌ನವರಿಗೆ ಊಟ ಹಾಕಿಸುತ್ತೇನೆ ಎಂದು ಶಿವಕುಮಾರ್ ಹೇಳಿದ್ದು ಅವರ ಅಹಂಕಾರದ ಪರಮಾವಧಿ. ಸಂಘ ಪರಿವಾರದವರಿಗೆ ಊಟ ಹಾಕಿಸುವ ಅಗತ್ಯವೂ ಇಲ್ಲ ಮತ್ತು ಡಿ.ಕೆಗೆ ನೈತಿಕತೆಯೂ ಇಲ್ಲ’ ಎಂದರು.

‘ಊಟ ಹಾಕಿಸುವುದಿದ್ದರೆ, ಕಾಂಗ್ರೆಸ್‌ನಲ್ಲಿ ನಿರ್ಗತಿಕರಾಗಿರುವ ಬಹಳಷ್ಟು ನಾಯಕರಿದ್ದಾರೆ. ಫುಟ್‌ಪಾತ್‌ ಆಗಿರುವ ಅಂತಹ ನಾಯಕರಿಗೆ ಊಟ ಹಾಕಿಸಲಿ’ ಎಂದು ಅಶೋಕ ತರಾಟೆಗೆ ತೆಗೆದುಕೊಂಡರು.

‘ರಾಮನಗರ ಜಿಲ್ಲೆಯಲ್ಲಿ ಹಿಂದೂಗಳು ಜಾಗೃತರಾಗುತ್ತಿದ್ದಾರೆ. ಇದರಿಂದ ಡಿ.ಕೆ.ಶಿವಕುಮಾರ್‌ ಹೆದರಿದ್ದಾರೆ. ಅವರಿಗೆ ಉಳಿದಿರುವುದು ಕನಕಪುರ ಕ್ಷೇತ್ರ ಮಾತ್ರ. ಅದನ್ನು ಉಳಿಸಿಕೊಳ್ಳಲಿ. ರಾಮನಗರದಲ್ಲಿ ಕಲ್ಲಡ್ಕ ಪ್ರಭಾಕರ್‌ ಭಟ್‌ ಅವರು ಮಾತನಾಡಿರುವುದು ಸರಿಯಾಗಿಯೇ ಇದೆ’ ಎಂದರು.

‘ಕಪಾಲ ಬೆಟ್ಟದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮತಾಂತರ ಚಟುವಟಿಕೆಗಳು ಹೆಚ್ಚಾಗಿದೆ. ಒಂದೇ ಕೋಮಿಗೆ ಸೇರಿದವರಿಗೆ ಬೇಕಾಬಿಟ್ಟಿ ಜಮೀನು ಹಂಚಲಾಗಿದೆ. ಸರ್ಕಾರಿ ಭೂಮಿ ಲಪಟಾಯಿಸುವ ಪ್ರಯತ್ನವೂ ನಡೆದಿದೆ’ ಎಂದೂ ಅಶೋಕ ತಿಳಿಸಿದರು.

‘ನಾವು ಮುನೇಶ್ವರನ ಆರಾಧಕರು. ಮುನೇಶ್ವರ ಬೆಟ್ಟವನ್ನು ಉಳಿಸಿಕೊಳ್ಳಬೇಕಾಗಿದೆ. ಶಿವಕುಮಾರ್‌ ಅವರೂ ಮುನೇಶ್ವರನ ಭಕ್ತರೇ ಆಗಿದ್ದಾರೆ. ಮುನೇಶ್ವರ ಬೆಟ್ಟ ಉಳಿಸಿಕೊಳ್ಳುವ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು