ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು ವ್ಯಾಪ್ತಿಯಲ್ಲಿ 2,284 ಎಕರೆ ಅರಣ್ಯ ಒತ್ತುವರಿ!

ನಗರ ವ್ಯಾಪ್ತಿಯಲ್ಲಿ 16,998 ಎಕರೆ ಅರಣ್ಯ ಪ್ರದೇಶವಿದ್ದು, 2,284 ಎಕರೆ ಒತ್ತುವರಿಯಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
Published 12 ಜುಲೈ 2023, 0:43 IST
Last Updated 12 ಜುಲೈ 2023, 0:43 IST
ಅಕ್ಷರ ಗಾತ್ರ

ಬೆಂಗಳೂರು: ನಗರ ವ್ಯಾಪ್ತಿಯಲ್ಲಿ 16,998 ಎಕರೆ ಅರಣ್ಯ ಪ್ರದೇಶವಿದ್ದು, 2,284 ಎಕರೆ ಒತ್ತುವರಿಯಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ತುಳಸಿ ಮುನಿರಾಜುಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, 1,051 ಒತ್ತುವರಿ ಪ್ರಕರಣಗಳಲ್ಲಿ 339 ಪ್ರಕರಣಗಳಲ್ಲಿ 403 ಎಕರೆ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರು ದಕ್ಷಿಣ ಹಾಗೂ ಆನೇಕಲ್‌ನಲ್ಲೂ 587 ಎಕರೆ ಒತ್ತುವರಿ ಪತ್ತೆ ಹಚ್ಚಲಾಗಿದೆ. 18 ಪ್ರಕರಣಗಳಲ್ಲಿ ಒತ್ತುವರಿ ತೆರವು ಮಾಡದಂತೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಎಲ್ಲ ಜಾಗ ಮರಳಿ ಪಡೆಯಲು ಪ್ರಯತ್ನ ಮುಂದುವರಿಸಲಾಗುವುದು ಎಂದರು.

ಹೊಂದಾಣಿಕೆಗೆ ಪೊಲೀಸರ ಸಲಹೆ

ಭೂಮಾಫಿಯಾ ವಿರುದ್ಧ ದೂರು ನೀಡಲು ಹೋದರೆ ಪೊಲೀಸರು ಹೊಂದಾಣಿಕೆ ಮಾಡಿಕೊಳ್ಳುವಂತೆ ಸಲಹೆ ನೀಡುತ್ತಾರೆ. ಹಿಂದೆ 62 ಜನ ಸ್ನೇಹಿತರು ಸೇರಿ ತಿಂಗಳಿಗೆ 2 ಸಾವಿರ ಪಾವತಿಸಿ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ತಲಾ ಒಂದು ನಿವೇಶನ ಖರೀದಿಸಿದ್ದೆವು. ಈಗ ನಿವೇಶನಗಳನ್ನೇ ಒತ್ತುವರಿ ಮಾಡಲಾಗಿದೆ. ಪೊಲೀಸರಿಗೆ ದೂರು ನೀಡಿದರೆ, ಭೂಮಾಫಿಯಾ ಜತೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಸಲಹೆ ನೀಡುತ್ತಾರೆ ಎಂದು ಪರಿಷತ್‌ ಗಮನಕ್ಕೆ ತಂದರು.

ವಿಶ್ವಕರ್ಮರಿಗೆ ದೇವಸ್ಥಾನ ಸಮಿತಿಗಳಲ್ಲಿ ಅವಕಾಶ ನೀಡುವಂತೆ ಬಿಜೆಪಿ ಸದಸ್ಯ ಕೆ.ಪಿ.ನಂಜುಂಡಿ ಕೋರಿಕೆಗೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಸಮ್ಮತಿ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT