ಮಂಗಳವಾರ, ಡಿಸೆಂಬರ್ 7, 2021
19 °C

ಐ.ಟಿ.: ಕೆಲಸ ತೊರೆಯುವ ಪ್ರಮಾಣ ಹೆಚ್ಚಳ

ರಿಷಬ್ ಶಾ Updated:

ಅಕ್ಷರ ಗಾತ್ರ : | |

ಬೆಂಗಳೂರು: ದೇಶದ ಆರು ಮುಂಚೂಣಿ ಐ.ಟಿ. ಉದ್ದಿಮೆಗಳಲ್ಲಿ ಕೆಲಸ ತೊರೆಯುತ್ತಿರುವವರ ಪ್ರಮಾಣ ಏರಿಕೆ ಆಗಿದೆ. ಈ ಆರು ಕಂಪನಿಗಳಲ್ಲಿನ ನೌಕರರು ಕೆಲಸ ತೊರೆಯುತ್ತಿರುವ ಸರಾಸರಿ ಪ್ರಮಾಣವು ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಶೇಕಡ 17ಕ್ಕೆ ಏರಿಕೆ ಆಗಿದೆ. ಇದು ಜೂನ್‌ ತ್ರೈಮಾಸಿಕದಲ್ಲಿ ಶೇ 13ರಷ್ಟು ಇತ್ತು.

ಇನ್ಫೊಸಿಸ್ ಮತ್ತು ವಿಪ್ರೊ ಕಂಪನಿ ತೊರೆದಿರುವ ನೌಕರರ ಪ್ರಮಾಣವು ಶೇ 20ರಷ್ಟು, ಟಿಸಿಎಸ್ ತೊರೆದಿರುವ ನೌಕರರ ಪ್ರಮಾಣವು ಶೇ 11.9ರಷ್ಟು ಇದೆ. ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ಟಿಸಿಎಸ್ ತೊರೆದವರ ಪ್ರಮಾಣ ಶೇ 8.9ರಷ್ಟು, ಇನ್ಫೊಸಿಸ್ ತೊರೆದವರ ಪ್ರಮಾಣ ಶೇ 7.8ರಷ್ಟು ಹಾಗೂ ವಿಪ್ರೊ ತೊರೆದವರ ಪ್ರಮಾಣ ಶೇ 11ರಷ್ಟು ಇತ್ತು.

‘ಕೆಲಸ ತೊರೆಯುವ ನೌಕರರ ಪ್ರಮಾಣ ಕಡಿಮೆ ಆಗಬೇಕು ಎಂದಾ ದಲ್ಲಿ ಐ.ಟಿ. ಕಂಪನಿಗಳು ಹೆಚ್ಚಿನ ವೆಚ್ಚಕ್ಕೆ ಸಿದ್ಧರಾಗಬೇಕು. ಜಾಗತಿಕ ಮಟ್ಟದ ಕಂಪನಿಗಳು ತಮ್ಮ ಕೆಲಸ ಆನ್‌ಲೈನ್‌ ಮೂಲಕ ಆಗುವಂತೆ ನೋಡಿಕೊಳ್ಳಲು ಹಿಂದೆಂದಿಗಿಂತ ಹೆಚ್ಚು ವೆಚ್ಚ ಮಾಡುತ್ತಿವೆ. ಹಾಗಾಗಿ, ಕೆಲಸ ತೊರೆಯುವವರ ಪ್ರಮಾಣವು ಮುಂದಿನ ಎರಡು ವರ್ಷಗಳಲ್ಲಿ ಇನ್ನೂ ಹೆಚ್ಚಾಗಬಹುದು’ ಎಂದು ಇನ್ಫೊಸಿಸ್‌ನ ಮಾಜಿ ಸಿಎಫ್‌ಒ ಟಿ.ವಿ. ಮೋಹನದಾಸ್ ಪೈ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.

ಹೊಸದಾಗಿ ಕೆಲಸಕ್ಕೆ ಸೇರುವವರ ವೇತನದಲ್ಲಿ 2009ರ ನಂತರ ದೊಡ್ಡ ಹೆಚ್ಚಳ ಆಗಿಲ್ಲ. ಆದರೆ ಇದೇ ಅವಧಿಯಲ್ಲಿ ಸಿಇಒಗಳು ಹಾಗೂ ಉನ್ನತ ಹುದ್ದೆಗಳಲ್ಲಿ ಇರುವವರ ವೇತನವು ಎಂಟರಿಂದ ಹತ್ತು ಪಟ್ಟು ಹೆಚ್ಚಾಗಿದೆ ಎಂದು ಪೈ ಹೇಳಿದರು.

ಐ.ಟಿ. ಉದ್ಯಮದಲ್ಲಿ ಪ್ರತಿಭೆಗಳಿಗಾಗಿ ಮೂರು ದಶಕಗಳಲ್ಲಿ ಕಾಣದಿದ್ದಷ್ಟು ದೊಡ್ಡ ಹುಡುಕಾಟ ನಡೆದಿದೆ ಎಂದು ಇನ್ಫೊಸಿಸ್‌ ಸಿಒಒ ಯು.ಬಿ. ಪ್ರವೀಣ್ ರಾವ್ ಈಚೆಗೆ ಹೇಳಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು