ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಜ್ಯಾಕ್ ಫ್ರೂಟ್ 24’ ಸಂಗೀತ ಸಮ್ಮೇಳನ ಸೆ. 20ರಿಂದ

Published : 13 ಸೆಪ್ಟೆಂಬರ್ 2024, 16:12 IST
Last Updated : 13 ಸೆಪ್ಟೆಂಬರ್ 2024, 16:12 IST
ಫಾಲೋ ಮಾಡಿ
Comments

ಬೆಂಗಳೂರು: ‘ಭೂಮಿಜಾ’ ವತಿಯಿಂದ ಇಂಡಿಯನ್ ಮ್ಯೂಸಿಕ್ ಎಕ್ಸ್‌ಪೀರಿಯನ್ಸ್ ಮ್ಯೂಸಿಯಂ ಸಹಯೋಗದಲ್ಲಿ ‘ಜ್ಯಾಕ್ ಫ್ರೂಟ್ 24’ ಮಕ್ಕಳ ಸಂಗೀತ ಮೇಳದ ಆರನೇ ಆವೃತ್ತಿಗೆ ಜೆ.ಪಿ.ನಗರದ ಎಂಎಲ್‌ಆರ್ ಕನ್ವೆನ್ಷನ್‌ ಸೆಂಟರ್ ಮತ್ತು ಭಾರತೀಯ ಸಂಗೀತ ಅನುಭವ ವಸ್ತುಸಂಗ್ರಹಾಲಯ ತಯಾರಾಗಿದೆ. ಸೆಪ್ಟೆಂಬರ್‌ 20, 21 ಮತ್ತು 22ರಂದು ಈ ಸಂಗೀತ ಉತ್ಸವ ನಡೆಯಲಿದೆ.

ಗಾಯಕಿ ಶುಭಾ ಮುದ್ಗಲ್ ಸಂಗೀತ ಉತ್ಸವದ ನಿರ್ದೇಶಕರಾಗಿದ್ದಾರೆ. ದಾನಿ ಅರುಂಧತಿ ಮೂರ್ತಿ ಉತ್ಸವಕ್ಕೆ ಪ್ರೋತ್ಸಾಹಕರಾಗಿದ್ದಾರೆ.

ಉದ್ಘಾಟನಾ ಕಾರ್ಯಕ್ರಮದ ವಿಶೇಷವಾಗಿ ಸೆ.20ರಂದು ಸಂಜೆ 6ಕ್ಕೆ ಸೃಷ್ಟಿ ವಿಶೇಷ ಅಕಾಡೆಮಿಯ ಅಂಗವಿಕಲ ಮಕ್ಕಳು ‘ಸನ್ನಿ ಸಿಂಫನಿ’ ಎಂಬ ಸಂಗೀತ ಕಛೇರಿ ನಡೆಸಿಕೊಡಲಿದ್ದಾರೆ. ಗಾಯಕಿ ಎಂ.ಡಿ. ಪಲ್ಲವಿ ಅವರೊಂದಿಗೆ ಮಕ್ಕಳು ಜನಪ್ರಿಯ ಕನ್ನಡ ಹಾಡುಗಳನ್ನು ಪ್ರಸ್ತುತಪಡಿಸಲಿದ್ದಾರೆ. ಉದ್ಘಾಟನಾ ಗೋಷ್ಠಿಯ ನಿರ್ದೇಶಕಿ ಮತ್ತು ಸಂಚಾಲಕಿಯೂ ಆಗಿರುವ ಎಂ.ಡಿ. ಪಲ್ಲವಿ ಅವರು ಅನುಭವ ಹಂಚಿಕೊಳ್ಳಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT