ಗುರುವಾರ , ಏಪ್ರಿಲ್ 15, 2021
24 °C
ಚಿತ್ರದುರ್ಗ, ದಾವಣಗೆರೆ ಜೆಡಿಎಸ್‌ ಕಾರ್ಕಯರ್ತರ ಸಭೆ

ದೇವೇಗೌಡ ಎದುರಲ್ಲೇ ಜಟಾಪಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ತಮ್ಮೊಂದಿಗೆ ಮಾತನಾಡಿಲ್ಲ ಎಂದು ದೂರಿದ ಕಾರ್ಯಕರ್ತರು, ಅವರ ಸಮ್ಮುಖದಲ್ಲೇ ಕೂಗಾಟ, ನೂಕಾಟ ನಡೆಸಿ ವಾಗ್ಯುದ್ದಕ್ಕಿಳಿದ ಪ್ರಸಂಗ ಪಕ್ಷದ ಕಚೇರಿಯಲ್ಲಿ ಗುರುವಾರ ನಡೆಯಿತು.

ದಾವಣಗೆರೆ, ಚಿತ್ರದುರ್ಗ ಮತ್ತು ಹೊಳಲ್ಕೆರೆ ಭಾಗದ ಕಾರ್ಯಕರ್ತರ ಸಭೆ ನಡೆಯುತ್ತಿತ್ತು. ದೇವೇಗೌಡರನ್ನು ಮಾತನಾಡಿಸಲು ಹಲವು ಕಾರ್ಯಕರ್ತರು ಬಯಸಿದ್ದರು. ಆದರೆ ಅವರಿಗೆ ಅವಕಾಶ ಸಿಗಲಿಲ್ಲ.

ದೇವೇಗೌಡರು ಮಾಧ್ಯಮದವರ ಬಳಿಗೆ ಹೋಗುತ್ತಿದ್ದಂತೆಯೇ ಕಾರ್ಯಕರ್ತರು ಪರಸ್ಪರ ತಳ್ಳಾಟ, ಕೂಗಾಟಕ್ಕೆ ತೊಡಗಿದರು. ಆದರೆ ಕ್ಯಾಮೆರಾ ಕಣ್ಣುಗಳು ತಮ್ಮನ್ನು ಸೆರೆ ಹಿಡಿಯುತ್ತಿವೆ ಎಂಬ ಅರಿವಾದೊಡನೆ ಅವರೆಲ್ಲರೂ ಸಿಟ್ಟನ್ನು ಬದಿಗಿಟ್ಟು, ಮುಖದಲ್ಲಿ ನಗು ತರಿಸಿಕೊಂಡರು. ಈ ಮಧ್ಯೆ, ಅನರ್ಹ ಶಾಸಕ ಕೆ.ಗೋಪಾಲಯ್ಯ ಪ್ರತಿನಿಧಿಸಿದ್ದ ಮಹಾಲಕ್ಷ್ಮಿ ಲೇಔಟ್‌ ಕ್ಷೇತ್ರವನ್ನು ಕೈವಶ ಮಾಡಿಕೊಳ್ಳುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ಆರಂಭವಾಗಿದ್ದು, ಗುರುವಾರ ನೂತನ ಪದಾಧಿಕಾರಿಗಳನ್ನು ನೇಮಿಸಲಾಯಿತು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು