ಅಪಪ್ರಚಾರವೇ ಹಿನ್ನಡೆಗೆ ಕಾರಣ: ಟಿ.ಎ. ಶರವಣ

ಬೆಂಗಳೂರು: ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ನಡೆಸಿದ ಅಪಪ್ರಚಾರವೇ ಸಿಂದಗಿ ಹಾಗೂ ಹಾನಗಲ್ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ತಮ್ಮ ಪಕ್ಷದ ಹಿನ್ನಡೆಗೆ ಕಾರಣ ಎಂದು ಜೆಡಿಎಸ್ ವಕ್ತಾರ ಟಿ.ಎ. ಶರವಣ ಹೇಳಿದ್ದಾರೆ.
ಚುನಾವಣಾ ಫಲಿತಾಂಶ ಕುರಿತು ಪ್ರತಿಕ್ರಿಯಿಸಿರುವ ಅವರು, ‘ಎರಡು ಕ್ಷೇತ್ರಗಳ ಫಲಿತಾಂಶದಿಂದ ಜೆಡಿಎಸ್ ಪಕ್ಷದ ಸಾಮರ್ಥ್ಯ ಅಳೆಯಲು ಸಾಧ್ಯವಿಲ್ಲ. ಜನ ಕೊಟ್ಟಿರುವ ತೀರ್ಪನ್ನು ನಾವು ತಲೆಬಾಗಿ ಸ್ವೀಕರಿಸುತ್ತೇವೆ. ಬಿಜೆಪಿ ಮತ್ತು ಕಾಂಗ್ರೆಸ್ ಹಣದ ಬಲ, ಅಧಿಕಾರದ ಬಲ ಬಳಸಿ ಗೆದ್ದಿವೆ’ ಎಂದಿದ್ದಾರೆ.
ಈ ಫಲಿತಾಂಶದಿಂದ ಜೆಡಿಎಸ್ ಧೈರ್ಯ ಕಳೆದುಕೊಳ್ಳುವುದಿಲ್ಲ. ಜನಪರ ರಾಜಕಾರಣ ಮುಂದುವರಿಯಲಿದೆ. ಅನೈತಿಕ ರಾಜಕಾರಣವನ್ನು ತಮ್ಮ ಪಕ್ಷ ಮಾಡುವುದಿಲ್ಲ. ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಬಿಜೆಪಿ, ಕಾಂಗ್ರೆಸ್ ಬಣ್ಣ ಬಯಲಾಗಲಿದೆ. ಜನದ್ರೋಹಿ ರಾಜಕಾರಣವನ್ನು ಮೀರಿ ಜೆಡಿಎಸ್ ಎದ್ದು ಬರಲಿದೆ ಎಂದು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.