ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ಐಟಿಐ., ಡಿಪ್ಲೊಮಾ, ಎಂಜಿನಿಯರಿಂಗ್ ಪದವೀಧರ ಆಕಾಂಕ್ಷಿಗಳಿಗೆ ಬಹುರಾಷ್ಟ್ರೀಯ ಕಂಪನಿಗಳು ನೇಮಕಾತಿ ಆದೇಶ ನೀಡಿದವು. ಉದ್ಯೋಗಾವಕಾಶ ಪಡೆದವರಲ್ಲಿ ಅಂಗವಿಕಲರೂ ಇದ್ದಾರೆ ಎಂದು ಉದ್ಯೋಗ ಮೇಳದ ನೇತೃತ್ವ ವಹಿಸಿದ್ದ ಬಿಬಿಎಂಪಿ ಮಾಜಿ ಸದಸ್ಯ ಎನ್.ಆರ್.ರಮೇಶ್ ತಿಳಿಸಿದರು.