‘ಸಾಂಪ್ರದಾಯಿಕ ಮತ್ತು ಆಧುನಿಕ ವಿನ್ಯಾಸದ ವಜ್ರಾಭರಣಗಳು ಮತ್ತು ವಜ್ರಗಳೂ ಈ ಪ್ರದರ್ಶನದಲ್ಲಿ ಇವೆ. ಈ ವಜ್ರಗಳು ಕುಶಲಕರ್ಮಿಗಳ ಕುಸುರಿ ಕೆಲಸಕ್ಕೆ ಕನ್ನಡಿ ಹಿಡಿದಂತಿವೆ. ಕಚ್ಚಾರೂಪದ ‘ಅನ್‌ಕಟ್’ ವಜ್ರಗಳು, ಅತ್ಯಪರೂಪದ ವಜ್ರಗಳು, ಅಪರೂಪದ ವಜ್ರಾಭರಣಗಳನ್ನು ಪ್ರದರ್ಶನದಲ್ಲಿ ಇರಿಸಲಾಗಿದೆ’ ಎಂದು ಜೋಯಾಲುಕ್ಕಾಸ್ ತಿಳಿಸಿದೆ.