ಕೆ.ಆರ್.ಪುರ: ‘ಶಾಲೆಯ ಮಕ್ಕಳಿಗೆ ನಮ್ಮ ದೇಶದ ಸಂಸ್ಕ್ರತಿಯನ್ನು ಪರಿಚಯಿಸುವ ಉದ್ದೇಶದಿಂದ ‘ಏಕ್ ಭಾರತ್ ಶ್ರೇಷ್ಠ ಭಾರತ್– ಕಲಾ ಉತ್ಸವ’ ಹಮ್ಮಿಕೊಳ್ಳಲಾಗಿದೆ’ ಎಂದು ಡಿಆರ್‌ಡಿಒ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಎಚ್.ನಾರಾಯಣರಾವ್ ಹೇಳಿದರು.

ಕೆ.ಆರ್.ಪುರ ಸಮೀಪದ ನಾಗವಾರಪಾಳ್ಯದ ಡಿಆರ್‌ಡಿಒ ಕೇಂದ್ರೀಯ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ’ಕೆವಿಎಸ್ ರಾಷ್ಟ್ರೀಯ ಏಕ್ತಾ ಪರ್ವ-2024-25, ಏಕ್ ಭಾರತ ಶ್ರೇಷ್ಠ ಭಾರತ್ ಕಲಾ ಉತ್ಸವ‘ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

’ವಿವಿಧ ರಾಜ್ಯಗಳ ಭಾಷೆ, ಸಂಸ್ಕೃತಿ, ಕ್ರೀಡೆ, ಜನಪದ ಎಲ್ಲವೂ ಭಿನ್ನವಾಗಿರುತ್ತದೆ. ಇಂಥ ಸಂಸ್ಕೃತಿಯನ್ನು ನಗರದಲ್ಲಿರುವ ಕೇಂದ್ರೀಯ ವಿದ್ಯಾಲಯದ ಒಂಬತ್ತು ಶಾಖೆಗಳ ಮಕ್ಕಳಿಗೆ ಪರಿಚಯಿಸುವುದಕ್ಕಾಗಿ ಉತ್ತರಕಾಂಡ ರಾಜ್ಯದ ಸಂಸ್ಕೃತಿ ಬಿಂಬಿಸುವ ಹಲವು ಕಲಾ ಪ್ರದರ್ಶನಗಳನ್ನು ಉತ್ಸವದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.

ಕಲಾ ಉತ್ಸವದಲ್ಲಿ, ಕೆ.ಆರ್.ಪುರ ಕೇಂದ್ರೀಯ ವಿದ್ಯಾಲಯ, ಎನ್ಎಲ್‌ನ ಕೇಂದ್ರೀಯ ವಿದ್ಯಾಲಯ, ಯಲಹಂಕದ ಎಎಸ್‌ಸಿ ಕೇಂದ್ರದ ಕೇಂದ್ರೀಯ ವಿದ್ಯಾಲಯ, ಗೌರಿಬಿದನೂರು ಸೇರಿ ಒಂಬತ್ತು ಶಾಖೆಗಳಿಂದ 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಾ ಉತ್ಸವದಲ್ಲಿ ಪಾಲ್ಗೊಂಡಿದ್ದರು.

ವಿದ್ಯಾರ್ಥಿಗಳಿಗಾಗಿ ರಾಷ್ಟ್ರೀಯ ಗುಂಪು ನೃತ್ಯ, ಏಕಾಭಿನಯ, ಗೀತಾ ಗಾಯನ, ವಾದ್ಯ ಸಂಗೀತ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಡಿಆರ್‌ಡಿಒ ವಿಜ್ಞಾನಿ ಹಾಗೂ ಕೇಂದ್ರೀಯ ವಿದ್ಯಾಲಯಗಳ ಸಮಿತಿ ನಾಮನಿರ್ದೇಶಿತ ಅಧ್ಯಕ್ಷೆ ವರ್ಷಾ ಅಗರವಾಲ್, ಕಾರ್ಯಕ್ರಮ ಸಂಯೋಜಕ ಶ್ರೀಹರಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.