ಬುಧವಾರ, ಮೇ 18, 2022
25 °C
ಕನಕಪುರ ರಸ್ತೆ ಕನ್ನಡ ಬಳಗದ ಆಯೋಜನೆ: ಫೆ. 20ರಂದು ಕನ್ನಡದ ಪ್ರಮಾಣ ವಚನ

ಕನಕಪುರ ರಸ್ತೆಯಲ್ಲಿ ‘ಕನ್ನಡ ಕಂಕಣ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕನಕಪುರ ರಸ್ತೆ ಕನ್ನಡ ಬಳಗದ ವತಿಯಿಂದ ಪ್ರತಿ ತಿಂಗಳು ನಡೆಯುವ ‘ಕನ್ನಡ ಜಾತ್ರೆ’ ಕಾರ್ಯಕ್ರಮದ ಅಂಗವಾಗಿ ಈ ತಿಂಗಳು ‘ಕನ್ನಡ ಕಂಕಣ’ ಕಾರ್ಯಕ್ರಮ ಫೆ. 20ರಂದು ಸಂಜೆ 5ಕ್ಕೆ ನಗರದ ಜರಗನಹಳ್ಳಿ ಉದ್ಯಾನದಲ್ಲಿ ನಡೆಯಲಿದೆ.

ಈ ಕಾರ್ಯಕ್ರಮಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ, ಕನ್ನಡದ ಹೋರಾಟಗಾರ ರಾ.ನಂ.ಚಂದ್ರಶೇಖರ್ ಮತ್ತು ಹಿರಿಯ ಸಾಹಿತಿ ಜರಗನಹಳ್ಳಿ ಶಿವಶಂಕರ್ ಚಾಲನೆ ನೀಡಲಿದ್ದಾರೆ.

ಮಂಜುನಾಥ ಹಾಲುವಾಗಿಲು ಈ ಕಾರ್ಯಕ್ರಮದ ಪರಿಕಲ್ಪನೆ ರೂಪಿಸಿದ್ದಾರೆ ಎಂದು ಕಾರ್ಯಕ್ರಮದ ಆಯೋಜಕಿ ಭಾರ್ಗವಿ ಕನ್ನಡನಾಡು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು