ಬೆಂಗಳೂರು: ಹೊರ ರಾಜ್ಯದಿಂದ ಬಂದವರೂ ಸೇರಿದಂತೆ ಎಲ್ಲ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕನ್ನಡವನ್ನು ಸ್ಪಷ್ಟವಾಗಿ ಕಲಿತು, ಕನ್ನಡದಲ್ಲೇ ವ್ಯವಹರಿಸುವ ಮೂಲಕ ಜನ ಮೆಚ್ಚುಗೆ ಪಡೆಯಬೇಕು ಎಂದು ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಕೆ.ವಿ.ಶರತ್ ಚಂದ್ರ ಹೇಳಿದರು.

ಸರ್ಕಾರಿ ನೌಕರರ ಸಂಘ ಶನಿವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ, ನೂತನ ವರ್ಷದ ಸಂಭ್ರಮ ಹಾಗೂ ಜಾನಪದ–ಕನ್ನಡ ಗೀತೆಗಳ ಗುಂಪು ನೃತ್ಯ ಸ್ಪರ್ಧೆಯ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಲವು ಅಧಿಕಾರಿಗಳು ಮತ್ತು ಸಿಬ್ಬಂದಿ ಕನ್ನಡ ಸಾಹಿತ್ಯ, ಕಲೆ, ಸಂಗೀತದಲ್ಲಿ ಹೆಸರು ಮಾಡಿದ್ದಾರೆ. ಮೂಲತಃ ಪೊಲೀಸ್ ಇಲಾಖೆಯ ಅಧಿಕಾರಿಯಾದ ತಾವು ಅಪರಾಧ ಮತ್ತು ಕಾನೂನುಗಳ ಕುರಿತು ಮಾತನಾಡುತ್ತೇವೆ. ಈಗ ಕನ್ನಡ, ನಾಡು, ನುಡಿ, ರಾಜ್ಯೋತ್ಸವದ ಬಗ್ಗೆ ಮಾತನಾಡಲು ಹರ್ಷವೆನಿಸುತ್ತಿದೆ. ರಾಜ್ಯ ಸರ್ಕಾರಿ ನೌಕರರ ಸಂಘ ಆಡಳಿತದಲ್ಲಿ ಕನ್ನಡ ಅನುಷ್ಠಾನಕ್ಕೆ, ಕನ್ನಡ ನಾಡುನುಡಿ ರಕ್ಷಣೆಗೆ ಕೆಲಸ ಮಾಡುತ್ತಿದೆ. ಸಂಘದ ಸಾಮಾಜಿಕ ಕಾಳಜಿ ಅನನ್ಯ ಎಂದು ಶ್ಲಾಘಿಸಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಪತ್ರಕರ್ತ ಸುದರ್ಶನ ಚೆನ್ನಂಗಿಹಳ್ಳಿ, ಸಂಘದ ಪದಾಧಿಕಾರಿಗಳಾದ ಎಚ್.ಗಿರಿಗೌಡ, ಶಿವರುದ್ರಯ್ಯ, ಎಸ್.ಬಸವರಾಜ್, ಮಲ್ಲಿಕಾರ್ಜುನ ಬಳ್ಳಾರಿ, ಶಂಭುಗೌಡ, ಗೋವಿಂದ ರಾಜು, ಸತೀಶ್, ಮಲ್ಲಿಕಾರ್ಜುನ್ ಗೌಡ, ಅರುಣ್ ಕುಮಾರ್, ಹನುಮಂತರಾಯಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.